ಜಿಲ್ಲೆ

ಚೆಸ್ ಪಂದ್ಯಾವಳಿ 10ಕ್ಕೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ದೇಶಪಾಂಡೆ ನಗರದ ಇಂದ್ರಾಳಿಸ್ ಸ್ಕೂಲ್ ಆಫ್ ಲೈಫ್ ಸ್ಕಿಲ್ಸ್ ವತಿಯಿಂದ 9ನೇ ಅಂತರ್ ಶಾಲಾ ಹಾಗೂ ಪದವಿ ಪೂರ್ವ ರ್ಯಾಪಿಡ್ ಚೆಸ್ ಪಂದ್ಯಾವಳಿಯನ್ನು ನ. 10ರಂದು ಬೆಳಗ್ಗೆ 10.30ಕ್ಕೆ ಭವಾನಿನಗರದ ಶ್ರೀಮತಿ ವಿಮಲಾ ಕುಲಕರ್ಣಿ ಸ್ಮಾರಕ ಶಾಲೆ (ಭಾವದೀಪ)ಯಲ್ಲಿ ಆಯೋಜಿಸಲಾಗಿದೆ.

ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ಆಯೋಜಿಸಲಾಗಿದೆ. ಭಾಗವಹಿಸುವ ವಿದ್ಯಾರ್ಥಿಗಳು ಶಾಲೆಯ ಸಮವಸ್ತ್ರ ಹಾಗೂ ಗುರುತಿನ ಚೀಟಿಯೊಂದಿಗೆ ಆಗಮಿಸಬೇಕು. ನ. 8ರೊಳಗೆ ಹೆಸರು ನೋಂದಾಯಿಸಬೇಕು.

ಒಟ್ಟು 20 ರೋಲಿಂಗ್ ಟ್ರೋಫಿ ಮತ್ತು ವೈಯಕ್ತಿಕವಾಗಿ ಪ್ರತ್ಯೇಕ 60 ಟ್ರೋಫಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.