ಜಿಲ್ಲೆ

ಒತ್ತಡ ಮುಕ್ತ ಮನಸಿಗೆ ಚದುರಂಗ ಸಹಕಾರಿ

Gadag - Desk - Tippanna Avadoot

ಲಕ್ಷ್ಮೇಶ್ವರ: ಚದುರಂಗ(ಚೆಸ್)ದ ಆಟ ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಏಕಾಗ್ರತೆ, ಗೆಲುವಿನ ಮನೋಭಾವ ಮೂಡಿಸುವ ಜತೆಗೆ ಜ್ಞಾಪಕ ಶಕ್ತಿ ವೃದ್ಧಿಗೆ ಸಹಾಯಕವಾಗಲಿದೆ ಎಂದು ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಆರ್.ವಿ. ವೆರ್ಣೆಕರ ಹೇಳಿದರು.


ಗುರುವಾರ ಗೊಜನೂರಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ ಮತ್ತು ಬಾಲಕಿಯರ ಚೆಸ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.


ಬಿಇಒ ಜಿ.ಎಂ. ಮುಂದಿನಮನಿ ಮಾತನಾಡಿ, ಚೆಸ್ ಆಟದಲ್ಲಿ ವಿದ್ಯಾರ್ಥಿಗಳಿಗೆ ಏಕಾಗ್ರತೆ, ಶ್ರದ್ಧೆ, ಆತ್ಮವಿಶ್ವಾಸ ಬೇಕಾಗುತ್ತದೆ. ಸೋಲು- ಗೆಲುವು ಮುಖ್ಯವಲ್ಲ. ವಿದ್ಯಾರ್ಥಿಗಳು ಭಯಬಿಟ್ಟು ಆಟದಲ್ಲಿ ಪಾಲ್ಗೊಳ್ಳಬೇಕು. ಬಿಡುವಿನ ವೇಳೆ ಮನಸ್ಸು ಒತ್ತಡ ಮುಕ್ತವಾಗಿಸಲು ಈ ಆಟ ಪೂರಕವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಚೆಸ್ ಕ್ರೀಡೆಗೆ ಹೆಚ್ಚು ಒತ್ತು ನೀಡಿದೆ ಎಂದರು.


ಇಸಿಒ ಉಮೇಶ ಹುಚ್ಚಯ್ಯನಮಠ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎನ್. ಹವಳದ, ಪ್ರಾಚಾರ್ಯ ಎನ್.ಕೆ. ಹತ್ತಿಕಾಳ, ಎಂ.ಬಿ. ಹೊಸಮನಿ, ಜಿಲ್ಲಾ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ಗಿರೀಶ ಅಗಡಿ, ಶ್ರೀಕಾಂತ ಪೂಜಾರ, ಎಸ್.ಸಿ. ಗೋಲಪ್ಪನವರ, ಆರ್.ಎ. ಮುಲ್ಲಾ, ಎಂ.ಐ. ಕಣಿಕೆ, ನಾರಾಯಣ ಹೊಸೂರ, ಕೆ.ಪಿ. ಪಾಟೀಲ ಇದ್ದರು. ರಮೇಶ ಚವ್ಹಾಣ ನಿರೂಪಿಸಿದರು. ಚೆಸ್ ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ಮಟ್ಟಕ್ಕೆ ಆಯ್ಕೆ: ಪ್ರಾಥಮಿಕ ಶಾಲೆಯ ಬಾಲಕಿಯರ ವಿಭಾಗ: ಲಕ್ಷ್ಮೇಶ್ವರದ ಆಕ್ಸ್​ಪರ್ಡ್ ಶಾಲೆಯ ಸಿಂಚನಾ ಕಟ್ಟೆಣ್ಣವರ, ಲಿಟಲ್ ಹಾರ್ಟ್ ಶಾಲೆಯ ಸುಬೀಕ್ಷಾ ಜಿಗಳಿ, ಶಿರಹಟ್ಟಿಯ ಎಸ್​ಎಫ್​ಸಿ ಸ್ಕೂಲ್​ನ ಶ್ರೀನಿಧಿ ಚೌಕಿಮಠ, ಗೊಜನೂರ ಮುರಾರ್ಜಿ ಶಾಲೆಯ ಗೌತಮಿ ಸುಲ್ತಾನಪುರ, ನಾಗರಮಡವಿನ ಜಿಎಸ್​ಪಿಎಸ್​ನ ಭವಾನಿ ಆನೆಪ್ಪನವರ.


ಬಾಲಕರ ವಿಭಾಗ: ಲಕ್ಷ್ಮೇಶ್ವರದ ದಿ. ಯೂನಿಕ್ ಶಾಲೆಯ ಸಮೀರ್ ಮುಲ್ಲಾ, ಕುಂದ್ರಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರದೀಪ ಅಂಗಡಿ, ನಾಗರಮಡವಿನ ರವಿ ಕುರಿ ಮತ್ತು ಶರಣಪ್ಪ ಉಳ್ಳಟ್ಟಿ, ಶಿರಹಟ್ಟಿ ಸಿಸಿಎನ್ ಶಾಲೆಯ ಶಿವಪ್ರಸಾದ ಚೌಕಿಮಠ,
ಪ್ರೌಢಶಾಲೆಯ ಬಾಲಕರ ವಿಭಾಗ: ಲಕ್ಷ್ಮೇಶ್ವರ ಲಿಟಲ್ ಹಾರ್ಟ್ಸ್ ಶಾಲೆಯ ದಯಾನಂದ ಕುರ್ತಕೋಟಿ, ಮಾಹಾಂತೇಶ ಗಂಗಾಮತ, ಒಡೆಯರಮಲ್ಲಾಪುರ ಮುರಾರ್ಜಿ ಶಾಲೆಯ ಮಂಜುನಾಥ ಲಮಾಣಿ, ಗೊಜನೂರ ಮುರಾರ್ಜಿಯ ಚೇತನ ಕೋಣನತಂಬಗಿ, ದಿ. ಯೂನಿಕ್ ಶಾಲೆಯ ಭರತಗೌಡ ಕಾಶೆಟ್ಟಿ ಆಯ್ಕೆಯಾದರೆ.
ಬಾಲಕಿಯರ ವಿಭಾಗ: ಕೊಂಚಿಗೇರಿಯ ಲಕ್ಷ್ಮೀ ಬೆಳಗಟ್ಟಿ, ಲಕ್ಷ್ಮೇಶ್ವರ ಯೂನಿಕ್ ಶಾಲೆಯ ವರ್ಷಾ ಹಿರೇಮಠ, ಆಕ್ಸ್​ಪರ್ಡ್​ನ ಆಕಾಂಕ್ಷಾ ಪಾಟೀಲ, ಶಿಗ್ಲಿಯ ಎಸ್​ಎಸ್​ಕೆಯ ನಂದನಿ ಕಾಳಪ್ಪನವರ, ಗೊಜನೂರ ಮುರಾರ್ಜಿಯ ಸೌಮ್ಯಾ ಕುಂಬಾರ ಆಯ್ಕೆಯಾಗಿದ್ದಾರೆ.