ಜಿಲ್ಲೆ

ವಿದ್ಯಾರ್ಥಿಗಳಿಗೆ ಚೆಸ್ ಸ್ಪರ್ಧೆ

ಹುಬ್ಬಳ್ಳಿ: ಇಲ್ಲಿಯ ಗದಗ ರಸ್ತೆ ಸೇಂಟ್ ಆಂಡ್ರೀವ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಮಂಗಳವಾರ ಅಂತರ್ ಶಾಲಾ ಗ್ರುಪ್ ಸಿ ಚೆಸ್ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸೇಂಟ್ ಮೈಕಲ್ ಸ್ಕೂಲ್, ಕಾನ್ವೆಂಟ್ ಸ್ಕೂಲ್, ಎಸ್ಬಿಐ ಸ್ಕೂಲ್, ಫಾತಿಮಾ ಸ್ಕೂಲ್ ಸೇರಿ 16 ಶಾಲೆಗಳ ವಿದ್ಯಾಥಿರ್ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾಥಿರ್ಗಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಿದರು.

ವಿಜೇತರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಸೇಂಟ್ ಆಂಡ್ರೀವ್ಸ್ ಶಾಲೆಯ ಚೇರ್ಮನ್ ಚಂದ್ರಶೇಖರ ನೇರೆಲ್ಲಾ, ಪ್ರಾಚಾರ್ಯ ಕಿರಣ ಜಟ್ಟಿ ಇತರರು ಉಪಸ್ಥಿತರಿದ್ದರು.