ಜಿಲ್ಲೆ

ಸಂವಿಧಾನ ದಿನ! ವಿಶೇಷ ಚೇತನ ಮಕ್ಕಳ ವಿಶೇಷ ಭತ್ಯೆ ಚೆಕ್​ ವಿತರಣೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಭವ್ಯ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ಹೊಂದಿದೆ. ವಿವಿಧತೆಯಲ್ಲಿ ಏಕತೆ ಸಾರುವ ಭಾರತೀಯ ಸಂಸತಿಯು ವಿಶ್ವಕ್ಕೆ ಮಾದರಿಯಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಕೆ.ಎಸ್​.ಬೇಲೇರಿ ಹೇಳಿದರು.
ಸೋಮವಾರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡುಮಕ್ಕಳ ಶಾಲೆ ನಂ. 2 ರಲ್ಲಿ ಜರುಗಿದ ಭಾರತದ ಸಂವಿಧಾನ ದಿನ ಹಾಗೂ ವಿಶೇಷ ಚೇತನ ಮಕ್ಕಳ ವಿಶೇಷ ಭತ್ಯೆಯ ಚೆಕ್​ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನದ ಮೌಲ್ಯಗಳಾದ ಸಮಾನತೆ ಹಾಗೂ ಸ್ವಾತಂತ್ರ್ಯ, ಜಾತ್ಯಾತಿತತೆ, ಐಕ್ಯತೆ ಹಾಗೂ ಏಕತೆಗಳನ್ನು ನಾವೆಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವದು ಆದ್ಯ ಕರ್ತವ್ಯ. ವಿಶೇಷ ಚೇತನ ಮಕ್ಕಳಿಗೆ ಪ್ರೀತಿಯ ಆರೈಕೆಯ ಜೊತೆಗೆ ಮಕ್ಕಳು ಮುಖ್ಯವಾಹಿನಿಗೆ ಬರುವಲ್ಲಿ ಎಲ್ಲರೂ ಶ್ರಮಿಸೋಣ ಎಂದರು.
ಅಧ್ಯತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯನಿ ಎಸ್​. ಎಸ್​. ತೆರದಾಳ ಮಾತನಾಡಿ, ಸಂವಿಧಾನದ ಆಶಯಗಳನ್ನು ಎಲ್ಲರೂ ಮನನ ಮಾಡಿಕೊಂಡು ಅನುಸರಿಸಬೇಕು ಎಂದುರು.
ವಿಶೇಷ ಚೇತನ ಮಕ್ಕಳ ವಿಶೇಷ ಭತ್ಯೆಯ ಚೆಕ್​ ವಿತರಿಸಿ ಮಾತನಾಡಿದ ಶಾಲಾ ಎಸ್​ಡಿಎಂಸಿ ಅಧ್ಯ ಬಸವರಾಜ ದಂಡಿನ ಮಾತನಾಡಿ, ವಿಶೇಷ ಚೇತನ ಮಕ್ಕಳು ಶಾಲೆಗೆ ಬರುವಂತೆ ಮಾಡಲು ನಾವೆಲ್ಲರೂ ಪ್ರಯತ್ನಿಸೋಣ ಎಂದರು.
ಸಂಪನ್ಮೂಲ ವ್ಯಕ್ತಿ ವಿ.ಟಿ.ದಾಸರಿ ಪ್ರಾಸ್ತಾವಿಕ ಮಾತನಾಡಿದರು, ವಿ. ಎಂ. ಚರಂತಿಮಠ, ಬಸಮ್ಮ ತ್ರಿ, ವನಿತಾ ಹುಬ್ಬಳ್ಳಿ, ರೇಣುಕಾ ರಾಯಬಾಗ, ಯಲ್ಲಮ್ಮ ಬದಿ, ಗೀತಾ ಮಂಗಳೂರು, ಲಲಿತಾ ತಳವಾರ ಹಲವರು ಇದ್ದರು.

27ಜಿಡಿಜಿ07
ಗದಗ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡುಮಕ್ಕಳ ಶಾಲೆ ನಂ. 2 ರಲ್ಲಿ ವಿಶೇಷ ಚೇತನ ಮಕ್ಕಳ ವಿಶೇಷ ಭತ್ಯೆಯ ಚೆಕ್​ ಅನ್ನು ಕೆ.ಎಸ್​.ಬೇಲೇರಿ ವಿತರಿಸಿದರು. ಎಸ್​. ಎಸ್​. ತೆರದಾಳ, ವಿ.ಟಿ.ದಾಸರಿ, ವಿ. ಎಂ. ಚರಂತಿಮಠ ಇತರರು ಇದ್ದರು.