ಗದಗ : ರಾಣಿ ಚನ್ನಮ್ಮಾ ವಿವಿಧೋದ್ದೇಶಗಳ ಸಹಕಾರಿ ಸಂಘದ ೧೦ನೇ ವಾರ್ಷಿಕ ಸರ್ವಸಾಧಾಋಣ ಸಭೆಯನ್ನು ಶ್ರೀ ಕಾಶಿ ವಿಶ್ವನಥ ದೇವಸ್ಥಾನ, ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನ, ವಿವೇಕಾನಂದ ನಗರ, ಗದಗದಲ್ಲಿ ಜರುಗಿತು.
ಬ್ಯಾಂಕಿನ ಅಧಿಕ್ಷರಾದ ಶ್ರೀ ಮಹೇಶ ಬಿ. ಗದಗಿನ (ಕರಿಬಿಷ್ಠಿ) ರವರು ಸಭೆಯನ್ನುದ್ದೇಶಿಸಿ ಮಾತನಾಡಿ, ಸಂಸ್ಥೆಯನ್ನು ಎಲ್ಲರೂ ಕೈಜೋಡಿಸಿ ಉನ್ನತ ಮಟ್ಟದಲ್ಲಿ ಬೆಳೆಸೋಣ ಮತ್ತು ನಾವು ಹಾಕುವ ಯೋಜನೆಗೆ ಸರ್ವರೂ ಸಹಕಾರ ನೀಡಬೇಕು. ಸಂಘದ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸ್ಪಂದಿಸಿ ಅವರಿಗೆ ಅವಶ್ಯವಿದ್ದಲ್ಲಿ ಮಾತ್ರ ಸಾಲವನ್ನು ನೀಡಿ ಸಾಲವನ್ನು ಮರುಪಾವತಿ ಮಾಡಿಸುವಲ್ಲಿ ಸಂಘದ ಸರ್ವ ಸದಸ್ಯರು ಹಾಗೂ ಪದಾಧಿಕಾರಿಗಳು ಉತ್ತಮ ರೀತಿಯಲ್ಲಿ ಸಲಹೆ ಸಹಕಾರ ನೀಡುತ್ತ ಬಂದಿರುವುದಕ್ಕೆ ವೈಯಕ್ತಿಕವಾಗಿ ಹಾಗೂ ಸಂಘದ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಸಂಘವನ್ನು ಇದೇ ರೀತಿಯಾಗಿ ಸರ್ವ ವಿಧದಲ್ಲೂ ಅಭಿವೃದ್ಧಿ ಪಡಿಸುವತ್ತ ಗಮನ ಹರಿಸೋಣ ಎಂದು ಹೇಳದರು.
ಆರಂಭದಲ್ಲಿ ಕೆಲವು ಮಾತ್ರ ಸಾಲಗಳನ್ನು ನೀಡುತ್ತಿದ್ದ ಸಂಘವು ಇದೀಗ ಎಲ್ಲ ರೀತಿಯ ಸಾಲಗಳನ್ನು ಅಂದರೆ, ಜಾಮೀನು ಸಾಲ, ಪಿಗ್ಮಿ ಸಾಲ, ಅಸ್ತಿ ಸಾಲ, ವಾಹನ ಸಾಲ ಸೇರಿದಂತೆ ಇನ್ನೂ ಅನೇಕ ಸಾಲಗಳನ್ನು ಪೂರೈಸುವಲ್ಲಿ ಸಂಘವು ಬೆಳೆದು ನಿಂತಿರುವುದು ಅತಿ ಸಂತೋಷಕರ ಸಂಗತಿ ಹಾಗೂ ಇದಕ್ಕೆ ಮೂಲ ಕಾರಣೀಕರ್ತರಾದ ಎಲ್ಲ ಸದಸ್ಯರ ಸಲಹೆ ಸಹಕಾರವೇ ಆಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ ಪಿ. ಹುಣಸಿಕಟ್ಟಿಯವರು ಮಾತನಾಡಿ ಸಂಸ್ಥೆಯ ಏಳಿಗೆಗಾಗಿ ಶ್ರಮವಹಿಸಿದ ಎಲ್ಲ ನಿರ್ದೇಶಕರುಗಳಿಗೆ ಕೃತಜ್ಞತೆ ಸಲ್ಲಿಸಿ ಭವಿಷ್ಯದಲ್ಲಿ ಕೂಡಾ ಇದೇ ರೀತಿಯಾಗಿ ಸಲಹೆ ಸಹಕಾರ ನೀಡುತ್ತ ಸಂಘವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆAದು ತಿಳಿಸಿದರು.
ಸಂಘದ ಮಾಜಿ ಅಧ್ಯಕ್ಷ ಎಮ್.ಎಸ್. ಪಾಟೀಲ ಒಗ್ಗಟ್ಟಿನಿಂದ ಕೆಲಸ ಮಾಡಿ ಹೊಸ ಹೊಸ ವಿಚಾರಗಳನ್ನು ತಿಳಿಸಿ ಅವುಗಳನ್ನು ಕಾರ್ಯರೂಪಕ್ಕೆ ತರುವ ಕೆಲಸವಾಗಬೇಕೆಂದರು. ಸಂಘವು ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಬೇಕು ಅದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಇನ್ನೋರ್ವ ನಿರ್ದೇಶಕರಾದ ಎಮ್.ಎಸ್. ಮಲ್ಲಾಪೂರವರು ಮಾತನಾಡಿ ಸಂಘವು ಒಂಭತ್ತು ವರ್ಷ ಪೂರೈಸಿ ೧೦ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ನಮ್ಮೆಲ್ಲರಿಗೆ ಸಂತೋಷ ತಂದಿದೆ. ಸಂಘವನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಹೊಂದಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸೇವೆಗೈಯುವ ಅವಕಾಶ ಸಂಘಕ್ಕೆ ಸಿಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಸಂಘದ ಇನ್ನೋರ್ವ ನಿರ್ದೇಶಕಿಯರಾದ ಶ್ರೀಮತಿ ಶಿವಲೀಲಾ ಪಿ. ಅಕ್ಕಿಯವರು ಸಭೆಯಲ್ಲಿ ಸೇರಿದ ಮಹಿಳಾ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ಮಹಿಳೆಯರು ಕೂಡ ಸಂಘದಿAದ ಪೂರೈಸುವ ಮಹಿಳಾ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಅವರೂ ಕೂಡ ಸಮಾಜದಲ್ಲಿ ಗೌರವ, ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳುವಂತೆ ಕರೆ ನೀಡಿದರು.
ಸಂಸ್ಥೆಯ ವಕೀಲರಾದ ಆರ್.ವ್ಹಿ. ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ವರದಿ ವಾಚನವನ್ನು ನೀಲಮ್ಮ ಪಿ. ಕೊಣ್ಣೂರ, ಸ್ವಾಗತ ಜಯಶ್ರೀ ಉಗಲಾಟದ, ನಿರೂಪಣೆ ಹಾಗೂ ವಂದನಾರ್ಪಣೆಯನ್ನು ನಾಗರಾಜ ದಡವಾಡ ಮಾಡಿದರು.
ಈ ಸಂದರ್ಭದಲ್ಲಿ ಸಂದರ್ಭದಲ್ಲಿ ನಿರ್ದೇಶಕರಾದ ಶ್ರಿಮತಿ ಜಯಶ್ರೀ ಉಗಲಾಟ, ಸುರೇಶ ಗೋಡಿ, ಈರಣ್ಣ ಮಾನೇದ, ಮಾಲತೇಶಗೌಡ ಹಿರೇಮನಿಪಾಟೀಲ, ಸಂಘದ ಸಿಬ್ಬಂದಿ ಹಾಗೂ ಸರ್ವ ಸದಸ್ಯರು ಹಾಜರಾಗಿದ್ದರು.