ಜಿಲ್ಲೆ

ಫೆ. 10ರಂದು ಚೆನ್ನೈ ಕರ್ನಾಟಕ ಸಂಘದ ಅಮೃತ ಮಹೋತ್ಸವ

Mangaluru - Hariprasad Rai



ಮಂಗಳೂರು : ಸ್ವಾತಂತ್ರೃ ಪೂರ್ವದಲ್ಲಿ ಅವಿಭಜಿತ ದ.ಕ.ಜಿಲ್ಲೆಯು ಮದ್ರಾಸ್ ಪ್ರಾಂತ್ಯದ ಭಾಗವಾಗಿತ್ತು. ಆಗ ಶೈಕ್ಷಣಿಕ
ಉದ್ಯಮ ,ಸರ್ಕಾರಿ ಹುದ್ದೆ ಸಹಿತ ವಿವಿಧ ವೃತ್ತಿ ನಿರ್ವಹಣೆಗೆ ಚೆನ್ನೈನಲ್ಲಿ ನೆಲೆಸಿದ್ದ ಕನ್ನಡಿಗರು ಸ್ಥಾಪಿಸಿದ ಕರ್ನಾಟಕ ಸಂಘ ಈಗ ಅಮೃತ ಮಹೋತ್ಸವದ ಹೊಸ್ತಿಲಿನಲ್ಲಿದೆ.
ಮದ್ರಾಸ್ ಸರ್ಕಾರದ ಸಚಿವರಾಗಿ ಸೇವೆ ಸಲ್ಲಿಸಿದ್ದ ಮೂಲತಃ ಉಡುಪಿಯವರಾದ ಡಾ.ಯು. ಕೃಷ್ಣ ರಾವ್ ನೇತ್ರತ್ವದಲ್ಲಿ ಚೆನ್ನೈ
ಕರ್ನಾಟಕ ಸಂಘ ಸ್ಥಾಪನೆಯಾಗಿತ್ತು. ಪ್ರಸ್ತುತ ಚೆನ್ನೈ ಕರ್ನಾಟಕ ಸಂಘವು ಯಶಸ್ವಿ 75ವರ್ಷಗಳನ್ನು ಪೂರೈಸಿ ಫೆ.10ಮತ್ತು 11ರಂದು
ಅಮೃತ ಮಹೋತ್ಸವ ಆಚರಿಸಲಿದೆ.
ಫೆ.10ರಂದು ತಮಿಳುನಾಡು ಸರ್ಕಾರದ ಮಾಜಿ ಆರೋಗ್ಯ ಸಚಿವ ಡಾ.ಎಚ್. ವಿ. ಹಂದೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಕರ್ಣಾಟಕ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಮುಖ್ಯಅತಿಥಿಯಾಗಿ
ಭಾಗವಹಿಸಲಿದ್ದಾರೆ. ಅಮೃತಧಾರಾ ಸ್ಮರಣ ಸಂಚಿಕೆಯನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಬಿಡುಗಡೆಗೊಳಿಸಲಿದ್ದಾರೆ. ಫೆ.11ರಂದು ಸಾಯಂಕಾಲ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್
ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.