ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಸಖಿಯರಿಗೆ ಹಮ್ಮಿಕೊಂಡಿದ್ದ ನೈಸರ್ಗಿಕ ಕೃಷಿ ತರಬೇತಿ ಕಾರ್ಯಕ್ರಮವನ್ನು ಡಾ.ಎ.ಬಿ.ಪಾಟೀಲ ಉದ್ಘಾಟಿಸಿದರು. ಡಾ.ಮಂಜುನಾಥ ಚೌರಡ್ಡಿ, ಎಸ್.ಎಂ.ವಾರದ, ಡಾ.ಎಸ್.ಎಸ್.ಹಿರೇಮಠ, ಜಿ.ಬಿ.ವಿಶ್ವನಾಥ, ಡಾ.ಭಾವಿನಿ ಪಾಟೀಲ ಇದ್ದರು. 
ಜಿಲ್ಲೆ

ರಸಾಯನಿಕಮುಕ್ತ ಕೃಷಿ ಉತ್ತೇಜಿಸಬೇಕು

ಬೆಳಗಾವಿ: ನೈಸರ್ಗಿಕ ಕೃಷಿ ಅನುಸರಣೆಯಿಂದ ರೈತರು ತಮ್ಮ ಕುಟುಂಬದ ಆರೋಗ್ಯ ರಸಿ, ಆರ್ಥಿಕವಾಗಿ ಸಬಲರಾಗುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಕೃಷಿ ಸಖಿಯರು ರಸಾಯನಿಕಮುಕ್ತ ಕೃಷಿ ಉತ್ತೇಜಿಸಬೇಕು ಎಂದು ಕೃಷಿ ಸಚಿವರ ವಿಶೇಷ ಕರ್ತವ್ಯಅಧಿಕಾರಿ ಡಾ.ಎ.ಬಿ.ಪಾಟೀಲ ಹೇಳಿದರು.

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್​&ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಕೃಷಿ ಸಖಿಯರಿಗೆ ಸೋಮವಾರ ಹಮ್ಮಿಕೊಂಡಿದ್ದ ನೈಸರ್ಗಿಕ ಕೃಷಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿ ಇಲಾಖೆಯಲ್ಲಿ ವಿಸ್ತರಣಾ ಕಾರ್ಯಕರ್ತೆಯರಾಗಿ ರೈತ ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸುತ್ತಿರುವ ಕೃಷಿ ಸಖಿಯರು ಗ್ರಾಮಮಟ್ಟದಲ್ಲಿ ನೈಸರ್ಗಿಕ ಕೃಷಿ ಪ್ರಾತ್ಯಕೆಗಳನ್ನು ನಡೆಸುವ ಉಸ್ತುವಾರಿ ಹೊಂದಿರುತ್ತಾರೆ. ಅವರ ಸಾಮರ್ಥ್ಯವನ್ನು ಹೆಚ್ಚಿಸಲು ಇಂತಹ ತರಬೇತಿ ಸಹಕಾರಿಯಾಗಲಿದೆ ಎಂದರು.

ಕೃಷಿ ಸಖಿಯರು ತರಬೇತಿಯಲ್ಲಿ ಕಲಿತ ವಿಷಯಗಳನ್ನು ರೈತರಿಗೆ ತಿಳಿಸಿ, ಈ ಯೋಜನೆಯನ್ನು ಸಮರ್ಥವಾಗಿ ಅಳವಡಿಸಿ ರಸಾಯನಿಕಮುಕ್ತ ಕೃಷಿ ಉತ್ತೇಜಿಸಬೇಕು.ಅಲ್ಲದೇ ಮೌಲ್ಯವರ್ಧನೆ, ಸಂಸ್ಕರಣೆ ಮೂಲಕ ಕೃಷಿ ಸಖಿಯರು ರೈತರ ಆದಾಯವನ್ನು ಅಧಿಕಗೊಳಿಸಲು ಶ್ರಮಿಸಬೇಕು ಎಂದು ಹೇಳಿದರು.

ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಮಾತನಾಡಿ, ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ ಇಡಿ ಜಿಲ್ಲೆಯಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ತರಬೇತಿ ಜವಾಬ್ದಾರಿಯನ್ನು ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರಕ್ಕೆ ನೀಡಲಾಗಿದೆ. ಕಾರ್ಯಕ್ರಮದ ಭಾಗವಾಗಿ ಕೃಷಿ ಸಖಿಯರಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಲು ಕೇಂದ್ರದಲ್ಲಿ ನೈಸರ್ಗಿಕ ಕೃಷಿ ಪ್ರಾತ್ಯಕೆ ಪರಿಕರಗಳ ಉತ್ಪಾದನೆ ಟಕ ಹಾಗೂ ಸಸ್ಯ ಅನುಷ್ಠ್ಠಾನಗೊಳಿಸಲಾಗಿದೆ ಎಂದರು.

ಕೇಂದ್ರದ ನೋಡಲ್​ ಅಧಿಕಾರಿ ಎಸ್​.ಎಂ.ವಾರದ, ಕೇಂದ್ರದ ವಿಜ್ಞಾನಿ ಡಾ.ಎಸ್​.ಎಸ್​.ಹಿರೇಮಠ, ಜಿ.ಬಿ.ವಿಶ್ವನಾಥ, ಪ್ರವಿಣ ಯಡಹಳ್ಳಿ, ಡಾ.ಭಾವಿನಿ ಪಾಟೀಲ, ಡಾ.ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ ಇತರರಿದ್ದರು.