ಜಿಲ್ಲೆ

ರಾಸಾಯನಿಕಯುಕ್ತ ಆಹಾರ ಮಾರಾಟ ಹೆಚ್ಚಳ ಕಳವಳಕಾರಿ - ಸಂಸದ ಜೊಲ್ಲೆ

ಚಿಕ್ಕೋಡಿ/ಬೆಂಗಳೂರು: ಮಾರುಕಟ್ಟೆಯಲ್ಲಿ ರಾಸಾಯನಿಕಯುಕ್ತ ಆಹಾರೋತ್ಪನ್ನಗಳ ಹಾವಳಿ ಹೆಚ್ಚಾಗಿವೆ ಎಂದು ಚಿಕ್ಕೋಡಿ ಸಂಸದ ಹಾಗೂ ಕೆಒಎಫ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಕಳವಳ ವ್ಯಕ್ತಪಡಿಸಿದ್ದಾರೆ.

ಈಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ರಾಜ್ಯ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿಯ 37ನೇ ವಾರ್ಷಿಕ ಸರ್ವ ಸಾಧರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವ್ಯಾಪಾರಿ ಮನಸ್ಥಿತಿಯ ಕಂಪನಿಗಳು ಆರೋಗ್ಯಕ್ಕೆ ಮಾರಕವಾಗಿರುವ ಕಳಪೆ ಪದಾರ್ಥಗಳನ್ನು ಮಿತಿಮೀರಿ ಮಾರಾಟ ಮಾಡುತ್ತಿವೆ. ಆದರೆ, ಸಫಲ್ ಕಂಪನಿಯು ಸಾಮಾನ್ಯ ಜನರ ಸಧೃಡ ಆರೋಗ್ಯಕ್ಕಾಗಿ, ಉತ್ತಮ ಗುಣಮಟ್ಟದ ಸಾವಯವ ಆಹಾರೋತ್ಪನಗಳನ್ನು ಒದಗಿಸುವ ಮೂಲಕ ಗ್ರಾಹಕರ ಸೇವೆಗೆ, ಆರೋಗ್ಯ ರಕ್ಷಣೆಗೆ ಮುಂದಾಗಿದೆ ಎಂದರು. ಬಳಿಕ ಸಫಲ್ ಕಂಪನಿಯ 3 ಹೊಸ ಉತ್ಪನ್ನಗಳಾದ ಉಪ್ಪು, ಸಾವಯವ ಬೆಲ್ಲ ಮತ್ತು ಕಾಫಿ ಪುಡಿಯನ್ನು ಬಿಡುಗಡೆ ಮಾಡಿದರು.

ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿ ಉಪಾಧ್ಯಕ್ಷ ಶಂಕ್ರಪ್ಪಗೌಡ ಪೊಲೀಸ್ ಪಾಟೀಲ, ಚಿತ್ರದುರ್ಗ,ಹುಬ್ಬಳ್ಳಿ, ರಾಯಚೂರು ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಿ. ಸೋಮಶೇಖರ ಉಪಸ್ಥಿತರಿದ್ದರು.