ಜಿಲ್ಲೆ

ಅರಕಲಗೂಡು ತಾಲೂಕಿನ ಚೌರಗಲ್ ಬಳಿ ಚಿರತೆ ಸೆರೆ

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ಚೌರಗಲ್ ಎಚ್.ಆರ್.ಪಿ. ಬಳಿ ಇಂದು ಬೆಳಗಿನ ಜಾವ ಗಂಡು ಚಿರತೆ ಬೋನಿಗೆ ಬಿದ್ದಿದೆ.

ಕಳೆದ ಕೆಲ‌ ತಿಂಗಳಿನಿಂದ ಈ ಭಾಗದಲ್ಲಿ ಹಗಲಿರುಳೆನ್ನದೆ ಅಡ್ಡಾಡುತ್ತಿದ್ದ ಚಿರತೆ‌ ಮೇಯಲು ಬಿಟ್ಟಿದ್ದ ಆಡು ಹಾಗೂ ನಾಯಿಗಳನ್ನು ಕೊಂದು ಜನರಲ್ಲಿ ಭೀತಿ ಮೂಡಿಸಿತ್ತು.

ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಐದು ದಿನಗಳ ಹಿಂದೆ ಚಿರತೆ‌ ಸೆರೆಗೆ ಬೋನು ಇರಿಸಿದ್ದರು. ಪೊದೆಯಲ್ಲಿ ಅವಿತು ಬೆಳೆ ಜಮೀನಿನಲ್ಲಿ ತಿರುಗಾಡುತ್ತಾ ಆಹಾರಕ್ಕಾಗಿ ಹೊಂಚು ಹಾಕುತ್ತಿದ್ದ‌ ಚಿರತೆ ಬೋನಿಗೆ ಕಟ್ಟಿದ್ದ ನಾಯಿ ತಿನ್ನಲು ಬಂದು ಸೆರೆಯಾಗಿದೆ. ಕಡೆಗೂ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆಯಾಗಿರುವುದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.