ಜಿಲ್ಲೆ

ಆವಣಿ ಬೆಟ್ಟದಲ್ಲಿ ಚಿರತೆ ಹೆಜ್ಜೆ ಗುರುತು

Kolar

ಮುಳಬಾಗಿಲ: ತಾಲೂಕಿನ ಆವಣಿ ಬೆಟ್ಟದಲ್ಲಿ ಎರಡು ಮರಿಗಳೊಂದಿಗೆ ಚಿರತೆ ಕಾಣಿಸಿಕೊಂಡಿರುವುದು ಹಾಗೂ ಗ್ರಾಮಗಳಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಕಳೆದ 2 ತಿಂಗಳ ಹಿಂದೆ ತಾಲೂಕಿನ ನಂಗಲಿ, ಚಾಮರೆಡ್ಡಿಹಳ್ಳಿ ಆಲಂಗೂರು, ಪಿಚ್ಚಗುಂಟ್ಲಹಳ್ಳಿ, ದೇವರಾಯಸಮುದ್ರ, ಹೊಸಕೆರೆ, ದೊಡ್ಡವನ್ನಶೆಟ್ಟಿಹಳ್ಳಿ ಸುತ್ತಮುತ್ತಲು ಪ್ರದೇಶಗಳಲ್ಲಿ ಕುರಿ, ಮೇಕೆ, ನಾಯಿಗಳ ಮೇಲೆ ಚಿರತೆ ದಾಳಿ ಮಾಡಿರುವ ಪ್ರಕರಣ ವರದಿಯಾಗಿತ್ತು.

ಇತ್ತೀಚೆಗೆ ಹೊನಶೆಟ್ಟಿಹಳ್ಳಿಯ ಹೊರವಲಯದಲ್ಲಿ ಮೇಕೆ ಮೇಲೆ ದಾಳಿ ಮಾಡಿದ ಘಟನೆ ಹಾಗೂ ದೇವರಾಯಸಮುದ್ರ ಬೆಟ್ಟದ ತಪ್ಪಲಿನ ಜಮೀನುಗಳಲ್ಲಿ ಚಿರತೆ ಮತ್ತು ಮರಿಗಳ ಹೆಜ್ಜೆಗಳು ಕಂಡುಬಂದಿವೆ.

ತಕ್ಷಣ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಆವಣಿ ಮತ್ತು ದೇವರಾಯ ಸಮುದ್ರಗಳಲ್ಲಿ ಚಿರತೆ ಹೆಜ್ಜೆ ಜಾಡು ಹಿಡಿದು ಬೋನುಗಳನ್ನು ಇಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಭಾಗದ ಗ್ರಾಮಸ್ಥರು ಕೃಷಿ ಚಟುವಟಿಕೆಗಳಿಗೆ ಒಂಟಿಯಾಗಿ ಹೋಗಲು ಮತ್ತು ಕುರಿಗಾಹಿಗಳು ಕುರಿ ಮೇಕೆ ಮತ್ತು ಜಾನುವಾರು ಮೇಯಿಸಲು ಬೆಟ್ಟ-ಗುಡ್ಡಗಳಿಗೆ ಹೋಗಲಾಗದ ಸ್ಥಿತಿಯಲ್ಲಿದ್ದಾರೆ. ಅರಣ್ಯ ಇಲಾಖೆ ತಕ್ಷಣ ನುರಿತ ತಂಡವನ್ನು ಕರೆಸಿ ಚಿರತೆ ಸೆರೆಹಿಡಿದು ಮುಂದಾಗುವ ಅನಾಹುತವನ್ನು ತಡೆಯಬೇಕಿದೆ.

ದೇವರಾಯಸಮುದ್ರ ಮತ್ತು ಆವಣಿ ಬೆಟ್ಟ-ಗುಡ್ಡಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಮಳೆಯಾದ್ದರಿಂದ ಹೆಜ್ಜೆ ಗುರುತು ಸಹ ಪತ್ತೆಯಾಗಿದೆ. ಎರಡು ಕಡೆ ಬೋನುಗಳನ್ನು ಇಡಲಾಗಿದೆ. ಆದರೆ ಚಿರತೆ ಬೀಳುತ್ತಿಲ್ಲ. ಟಿ.ಕೃಷ್ಣಮೂರ್ತಿ ಉಪವಲಯ ಆರಣ್ಯಾಧಿಕಾರಿ, ಮುಳಬಾಗಿಲು ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಅದರೆ ಚಿರತೆ ಓಡಾಡಿರುವ ಗುರುತು ಪತ್ತೆ ಮಾಡಿ ಬೋನು ಇಡಲಾಗಿದೆ. ಕೆ.ಎನ್.ರವಿಕೀರ್ತಿ ಆರ್‌ಎಫ್‌ಒ ಅರಣ್ಯ ಇಲಾಖೆ ಮುಳಬಾಗಿಲು ಬೆಟ್ಟದಲ್ಲಿ ಚಿರತೆ ಮರಿಗಳೊಂದಿಗೆ ಕಾಣಿಸಿಕೊಂಡಿದ್ದನ್ನು ಮೊಬೈಲ್‌ನಲ್ಲಿ ಕೆಲವರು ೆಟೋ ತೆಗೆದಿದ್ದಾರೆ. ಅರಣ್ಯ ಇಲಾಖೆಯವರು ಚಿರತೆ ಸೆರೆಹಿಡಿದು ಸುತ್ತಮುತ್ತಲ ಗ್ರಾಮಸ್ಥರ ಆತಂಕ ನಿವಾರಿಸಬೇಕು. ರಮೇಶ್, ಹೊಸಕೆರೆ ಗ್ರಾಮಸ್ಥ