ಜಿಲ್ಲೆ

ನವಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ

ಎ. ಆರ್. ರಘುರಾಮ


ವಿಜಯವಾಣಿ ಸುದ್ದಿಜಾಲ ಕುಶಾಲನಗರ
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮದಲ್ಲಿ ಶುಕ್ರವಾರ ಚಿರತೆ ಪ್ರತ್ರಯಕ್ಷವಾಗಿ ನಿವಾಸಿಗಳ ಆತಂಕ ಹೆಚ್ಚಿಸಿದೆ.
ನವಗ್ರಾಮದಲ್ಲಿ ಅಂಗನವಾಡಿ ಬಳಿ ಮೂವರು ವಾಯು ವಿಹಾರಕ್ಕೆ ತೆರಳಿದ್ದ ಸಂದರ್ಭ
ಚಿರತೆ ಕಂಡಿದೆ. ಈ ಬಗ್ಗೆ ನಿವಾಸಿಗಳಾದ ಶಶಿ, ಗಾಯತ್ರಿ ಎಂಬವರು ವಾರ್ಡ್ ಸದಸ್ಯ ಕೆ.ಬಿ.ಶಂಶುದ್ದೀನ್ ಮತ್ತು ವಲಯ ಅರಣ್ಯಾಧಿಕಾರಿ ರತನ್ ಕುಮಾರ್‌ಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.