ಜಿಲ್ಲೆ

ಬೋನಿಗೆ ಬಿದ್ದ ಗಂಡು ಚಿರತೆ

ಎ. ಆರ್. ರಘುರಾಮ

ಹೊಳೆನರಸೀಪುರ : ರೈತರಿಗೆ ಆತಂಕವನ್ನುಂಟು ಮಾಡಿದ್ದ ಎರಡು ವರ್ಷದ ಗಂಡು ಚಿರತೆ ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿಗೆ ಸೆರೆಯಾಗಿದೆ.
ತಾಲೂಕಿನ ದಾಳಗೌಡನಹಳ್ಳಿ ಗ್ರಾಮದ ಸುಶೀಲಮ್ಮ ಎಂಬುವರ ಜಮೀನಿನ ಬಳಿ ಗುರುವಾರ ರಾತ್ರಿ ಚಿರತೆ ಸೆರೆ ಸಿಕ್ಕಿದೆ. ಕೆಲವು ತಿಂಗಳುಗಳಿಂದ ದಾಳ ಗೌಡನಹಳ್ಳಿ ಗ್ರಾಮದ ಸುತ್ತಮುತ್ತ ಚಿರತೆ ಕಾಣಿಸಿಕೊಂಡು ರೈತರನ್ನು ಆತಂಕದಲ್ಲಿ ಇರಿಸಿತ್ತು.
ಚಿರತೆ ಸೆರೆಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಎಚ್ಚೆತ್ತ ಅರಣ್ಯ ಸಿಬ್ಬಂದಿ ಕಳೆದ ತಿಂಗಳಿಂದಲೇ ಚಿರತೆಯ ಚಲನ ವಲನಗಳನ್ನು ತಿಳಿದು ಬೋನು ಇರಿಸಿದ್ದರು. ಬೋನಿಗೆ ಬಿದ್ದಿರುವ ಚಿರತೆಯನ್ನು ಗಮನಿಸಿದ ರೈತರು ಈಗ ನಿಟ್ಟಿಸಿರುಬಿಟ್ಟಿದ್ದಾರೆ. ಆರ್ ಎಫ್‌ಒ ಪ್ರದೀಪ್ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಣೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

( ಚಿತ್ರ ಇದೆ)
ಬೋನಿಗೆ ಬಿದ್ದ ಚಿರತೆ