ಮಾನ್ವಿ: ಚೀಕಲಪರ್ವಿ ರುದ್ರಮುನೀಶ್ವರ ಮಠದಲ್ಲಿ ವಿರೂಪಾಕ್ಷ ಸ್ವಾಮಿಗಳ 9ನೇ ಪುಣ್ಯಸ್ಮರಣೆ ಅಂಗವಾಗಿ ಶುಕ್ರವಾರ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ ನಡೆಯಿತು. ಗದ್ದುಗೆಯನ್ನು ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಠದ ಪೀಠಾಧ್ಯಕ್ಷ ಸದಾಶಿವ ಸ್ವಾಮೀಜಿ ಮಾತನಾಡಿ, ವಿರೂಪಾಕ್ಷ ತಾತ ದಾಸೋಹ ಪ್ರೇಮಿಗಳಾಗಿದ್ದರು. ಮಠಕ್ಕೆ ಆಗಮಿಸುವ ಭಕ್ತರಿಗೆ ದಾಸೋಹ ಮಾಡಿಸಿ ಕಳಿಸುತ್ತಿದ್ದರು. ತ್ರಿವಿಧ ದಾಸೋಹಿಗಳಾದ ಬಸವಾದಿ ಶರಣರ ತತ್ವಗಳ ಪರಿಪಾಲಕರಾಗಿದ್ದರು. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಮೈಸೂರಿನ ನಿರಂಜನ ಸ್ವಾಮೀಜಿ, ಬಳಗಾನೂರಿನ ಸಿದ್ದಬಸವ ಸ್ವಾಮೀಜಿ, ಮಾಜಿ ಶಾಸಕ ಹಂಪಯ್ಯ ನಾಯಕ, ಟಿಎಪಿಸಿಎಮ್‌ಎಸ್ ಅಧ್ಯಕ್ಷ ತಿಮ್ಮರಡ್ಡಿ ಭೋಗಾವತಿ, ಪ್ರಮುಖರಾದ ಚನ್ನಬಸವ ಬೆಟ್ಟದೂರು, ಚಂದ್ರಶೇಖರ್ರಗೌಡ ಚೀಕಲಪರ್ವಿ, ಮಲ್ಲನಗೌಡ ಪಾಟೀಲ್, ಮಾಬಲೇಶಗೌಡ, ಪಂಪನಗೌಡ ಪಾಟೀಲ್, ರುದ್ರಪ್ಪಗೌಡ ಇತರರು ಇದರು.