ಜಿಲ್ಲೆ

ಕ್ರೀಡೆಯಿಂದ ವಿದ್ಯಾರ್ಥಿಗಳ ಮನೋಬಲ ವೃದ್ಧಿ,  ಪ್ರೊ. ಎಸ್.ಕೆ. ಆದಪ್ಪನವರ ಅಭಿಮತ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ರಾಜನಗರ ಶಾ ಡಿ.ಜೆ. ಛೇಡಾ ಐಟಿಐ ನಲ್ಲಿ ಇತ್ತೀಚೆಗೆ ವಾರ್ಷಿಕ ಕ್ರೀಡಾಕೂಟ ಏರ್ಪಡಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಕೆ. ಆದಪ್ಪನವರ, ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ದೈಹಿಕ ಆರೋಗ್ಯ ಹೆಚ್ಚುತ್ತದೆ. ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಏನನ್ನಾದರೂ ಸಾಧಿಸಬೇಕಾದರೆ ಪಠ್ಯೇತರ ಚಟುವಟಿಕೆಗಳು ಅಗತ್ಯ ಎಂದರು.

ಅತಿಥಿಗಳಾಗಿದ್ದ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ. ಅಣ್ಣಿಗೇರಿ ಮಾತನಾಡಿ, ಕ್ರೀಡಾಕೂಟಗಳು ಆಟಗಾರನ ಛಲ, ಮನೋಬಲ, ಧೃಢ ನಿರ್ಧಾರದ ಗುಣ ಹಾಗೂ ಇಚ್ಛಾಶಕ್ತಿಗಳನ್ನು ಹೆಚ್ಚಿಸಲು ಸಹಕಾರಿಯಾಗಿವೆ ಎಂದರು.

ಪ್ರಾಚಾರ್ಯ ಆರ್.ಬಿ. ಸಾಬಣ್ಣವರ ಅಧ್ಯಕ್ಷತೆ ವಹಿಸಿದ್ದರು. ಆರ್.ಎನ್. ಕೋಟಿ ಸ್ವಾಗತಿಸಿದರು. ಗುರುಸಿದ್ದಪ್ಪ ಬಡಿಗೇರ ವಂದಿಸಿದರು. ವಿ.ಡಿ. ಧರಣೆಪ್ಪನವರ ನಿರ್ವಹಿಸಿದರು.

ವಿಜಯಲಕ್ಷ್ಮಿ ಮಂದವಾಡಿ, ಎಸ್.ಐ. ವನಹಳ್ಳಿಮಠ, ಆರ್.ಎನ್. ಅಪ್ಪಣ್ಣವರ, ವಿ.ವಿ. ಮೇಲ್ಮುರಿ, ಎಂ.ಕೆ. ಲಿಂಬಿಕಾಯಿ, ಡಿ.ಎಂ. ಜಾಕೋಬ್, ಎಂ.ಎಂ. ಹೂಗಾರ, ಎಸ್.ಜೆ. ಹಿರೇಮಠ, ಸಿ.ಎಸ್. ಜೈನರ, ಎಸ್.ಆರ್. ನೀರಾವರಿ, ವಿನಯ ಶೆಟ್ಟರ್, ಎಸ್.ಎಚ್. ಅಗಸಿಮನಿ, ಸ್ಪಂದನಾ ಕಂಬಳಿ, ಸಿಬ್ಬಂದಿ ಹಾಜರಿದ್ದರು.