ಜಿಲ್ಲೆ

20 ಚೆಕ್ ಪೋಸ್ಟ್, 46 ಸವಾರರ ವಿರುದ್ಧ ಕೇಸ್ !

ಶಿವಮೊಗ್ಗ: ಅಪರಾಧ ಮತ್ತು ಅಪಘಾತ ತಡೆಗೆ ವಿಶೇಷವಾಗಿ ಒತ್ತು ನೀಡಿದ ಜಿಲ್ಲಾ ಪೊಲೀಸರು ಶುಕ್ರವಾರ ರಾತ್ರಿ ಏಕಕಾಲಕ್ಕೆ ಜಿಲ್ಲೆಯ 20 ಕಡೆ ಚೆಕ್‌ಪೋಸ್ಟ್ ನಿರ್ಮಿಸಿ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದವರಿಗೆ ಬಿಸಿ ಮುಟ್ಟಿಸಿದರು.

ಶಿವಮೊಗ್ಗ, ಭದ್ರಾವತಿ, ಸಾಗರ, ತೀರ್ಥಹಳ್ಳಿ ಮತ್ತು ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯಲ್ಲಿ ಒಂದೇ ದಿನ ದಿಢೀರ್ ಕಾರ್ಯಾಚರಣೆ ನಡೆಸಿ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿದ 46 ಸವಾರರ ಮೇಲೆ ಕೇಸ್ ದಾಖಲಿಸಿದರು.

ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಖಾಕಿ ಪಡೆ, ಶಿವಮೊಗ್ಗ ವಿಭಾಗದಲ್ಲಿ 16, ಭದ್ರಾವತಿ ಉಪ ವಿಭಾಗದಲ್ಲಿ 3, ಸಾಗರ ಉಪ ವಿಭಾಗದಲ್ಲಿ 6, ಶಿಕಾರಿಪುರ ಉಪ ವಿಭಾಗದಲ್ಲಿ 5, ತೀರ್ಥಹಳ್ಳಿ ಉಪ ವಿಭಾಗದಲ್ಲಿ 16 ಪ್ರಕರಣ ಮಾಡಿ ದಂಡ ವಸೂಲಿ ಜತೆಗೆ ಕೆಲವರ ವಾಹನಗಳನ್ನೂ ಸೀಜ್ ಮಾಡಿದ್ದಾರೆ.