ಜಿಲ್ಲೆ

ಕೆಮ್ಮುಗೆ ಕೂಡಲೇ ಪರೀಕ್ಷಿಸಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಎರಡು ವಾರಗಳಿಗಿಂತಲೂ ಹೆಚ್ಚು ದಿನ ಕಡಿಮೆಯಾಗದ ಕೆಮ್ಮು ಇದ್ದಲ್ಲಿ ಬಹುಶಃ ಕ್ಷಯವಿರಬಹುದು. ಕೂಡಲೇ ತಪಸಾಣೆಗೆ ಒಳಗಾಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ರಾಜ್ಯ ಕ್ಷಯರೋಗ ಸಲಹೆಗಾರ್ತಿ ಡಾ.ಆಸ್ಮಾ ವರದಾ ಹೇಳಿದರು.

ಇಲ್ಲಿನ ಕೌಲಬಜಾರ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆಯ 100 ದಿನಗಳ ಅಭಿಯಾನದಡಿ ಜಿಲ್ಲಾಡಳಿತ ಒದಗಿಸಿರುವ ಆಧುನಿಕ ಸ್ಥಳದಲ್ಲಿಯೇ ರೋಗದ ಪತ್ತೆ ಹಚ್ಚುವಿಕೆಯ ಹ್ಯಾಂಡ್‌ಹೋಲ್ಡ್ ಎಕ್ಸ-ರೇ ಮೆಷಿನ್ ಮೂಲಕ ರೋಗ ನಿರ್ಧರಿಸುವ ಕಾರ್ಯ ಪರಿಶೀಲಿಸಿ ಮಾತನಾಡಿದರು. ಸಾವಿರಾರು ವರ್ಷಗಳಿಂದ ಸಮುದಾಯದಲ್ಲಿ ಬೇರುರಿರುವ ಕ್ಷಯರೋಗಯನ್ನು ಕೊನೆಗಾಣಿಸಲು ಉಚಿತ ಚಿಕಿತ್ಸೆ ನೀಡುವ ಜತೆಗೆ ಮೂಲಕ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗದರ್ಶನದಡಿ ವಯೋವೃದ್ಧರು, ಕಾರ್ಮಿಕರು, ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಬಳಲುವವರು ಮಾನಸಿಕ ಅಸ್ವಸ್ಥತೆಯುಳ್ಳವರಿಗೆ ಮೊದಲ ಅದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.