ಉಪ್ಪಿನಂಗಡಿ: ಶ್ರೀ ಗುರು ರಾಘವೇಂದ್ರ ಸ್ವಾಮಿ ಹೆಸರಿನಲ್ಲಿ ಹಾಕಿದ್ದ ಪಟಾಕಿ ಮಾರಾಟ ಮಳಿಗೆಯಲ್ಲಿ ದೊರಕಿದ ಲಾಭಾಂಶದಿಂದ 50,000 ರೂ. ಮೊತ್ತವನ್ನು ನೆಕ್ಕಿಲಾಡಿಯ ಶ್ರೀ ರಾಘವೇಂದ್ರ ಮಠದ ಅಭಿವೃದ್ಧಿ ಕಾರ್ಯಕ್ಕೆ ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಶ್ರೀ ರಾಘವೇಂದ್ರ ಮಠದ ಭಕ್ತರಾದ ನಾಗಭೂಷಣ್ ಮೇಲಾಂಟ, ದೇವಿ ಪ್ರಸಾದ್ ಶೆಟ್ಟಿ, ವಿನಯ ಕುಲಾಲ್, ಬಿಪಿನ್ ಜಗದೀಶ್, ಅವಿನಾಶ್ ಮತ್ತಿತರ ತಂಡ ಪಟಾಕಿ ಮಳಿಗೆ ಸ್ಥಾಪಿಸಿದ್ದು, ಪೂರ್ವ ಸಂಕಲ್ಪದಂತೆ ಲಾಭಾಂಶದ ಚೆಕ್ಕನ್ನು ಮಠದ ಲಕ್ಷದೀಪೋತ್ಸವ ವೇಳೆ ನೀಡಲಾಯಿತು.
ಮಠದ ಟ್ರಸ್ಟಿಗಳಾದ ಕೆ.ಉದಯ್ ಕುಮಾರ್, ಹರೀಶ್ ಉಪಾಧ್ಯಾಯ, ಎನ್.ಗೋಪಾಲ ಹೆಗ್ಡೆ, ಸ್ವರ್ಣೇಶ್ ಗಾಣಿಗ, ಕಂಗ್ವೆ ವಿಶ್ವನಾಥ ಶೆಟ್ಟಿ, ಸುಂದರ ಆದರ್ಶ ನಗರ, ವಿನಿತ್ ಶಗ್ರಿತ್ತಾಯ, ಕಾಮಾಕ್ಷಿ ಜಿ.ಹೆಗ್ಡೆ , ವಸುಧಾ ಉಪಾಧ್ಯಾಯ, ಶ್ರೀನಿಧಿ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.