ಜಿಲ್ಲೆ

ಮೃತನ ಕುಟುಂಬಕ್ಕೆ ಚೆಕ್ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ತಾಲೂಕಿನ ತಾರಿಹಾಳದಲ್ಲಿ ಕಳೆದ ತಿಂಗಳು ಸಿಡಿಲು ಬಡಿದು ಮೃತಪಟ್ಟ 17 ವರ್ಷದ ಬಾಲಕ ಅರುಣ ಚುನಮರಿ ಅವರ ನಿವಾಸಕ್ಕೆ ಶಾಸಕ ಅರವಿಂದ ಬೆಲ್ಲದ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಸರ್ಕಾರದ ಪರಿಹಾರ 5 ಲಕ್ಷ ರೂ. ಚೆಕ್ ಅನ್ನು ಶಾಸಕರು ಕುಟುಂಬದವರಿಗೆ ಹಸ್ತಾಂತರಿಸಿದರು.

ಪಾಲಿಕೆ ಸದಸ್ಯರಾದ ಶಂಕರ ಹೊಸಮನಿ, ಹನುಮಂತಪ್ಪ ಉಣಕಲ್, ಫಕ್ಕಿರಪ್ಪ ಗುಳಗನ್ನವರ, ಸುರೇಶ ಬಾದಾಮಿ, ಕಲ್ಲಪ್ಪ ಅನಾಡಿ, ರವಿ ಚುನಮುರಿ, ಮಾರುತಿ ಈಳಗೇರ, ಶಂಕರ ಕೋಟೂರ್, ಗಿರೀಶ ಆಲದಕಟ್ಟಿ ಇತರರು ಇದ್ದರು.