ಹೊಸಕೋಟೆಯ ಸಂತೆ ಸರ್ಕಲ್ ಬಳಿ ಡಿಎಚ್‌ಒ ನೀರು ಸಂಗ್ರಹಿಸಿದ್ದ ಡ್ರಮ್‌ಗಳನ್ನು ಖಾಲಿ ಮಾಡಿಸಿ ಸ್ಥಳಿಯರಿಗೆ ಅರಿವು ಮೂಡಿಸಿದರು. ತಾಲೂಕು ವೈದ್ಯಾಧಿಕಾರಿ ಡಾ.ವೀಣಾ, ನಗರಸಭೆಯ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಬಾಲು ಇದ್ದರು 
ಜಿಲ್ಲೆ

ಸಾಂಕ್ರಾಮಿಕ ತಡೆಗೆ ಸ್ವಚ್ಛತೆಯೊಂದೇ ಮಾರ್ಗ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಮಳೆಗಾಲದಲ್ಲಿ ಹೆಚ್ಚಾಗಿ ಹರಡುವ ಡೆಂಘೆ ಹಾಗೂ ಚಿಕೂನ್‌ಗುನ್ಯ ತಡೆಯಲು ಸ್ವಚ್ಛತೆಯೊಂದೇ ಮಾರ್ಗವಾಗಿದ್ದು, ಎಲ್ಲರೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಸುನೀಲ್ ಕುಮಾರ್ ತಿಳಿಸಿದರು.
ನಗರದ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತೆ ಪರಿಶೀಲಿಸಿ ಮಾತನಾಡಿದ ಅವರು, ಡೆಂಘೆಗೆ ಔಷಧ ಇಲ್ಲವಾದ್ದರಿಂದ ಕಾಯಿಲೆ ಬಾರದ ರೀತಿ ನೀಡಿಕೊಳ್ಳಬೇಕು, ಡೆಂಘೆ ಸೊಳ್ಳೆಗಳಿಂದ ಹರಡಲಿದ್ದು, ಸೊಳ್ಳೆಗಳ ನಿಯಂತ್ರಣ ಮಾಡಬೇಕಿದೆ. ತೊಟ್ಟಿ, ಡ್ರಮ್ ಹಾಗೂ ಸಂಗ್ರಹಿಸಿಟ್ಟ ನೀರಿನಿಂದ ಸೊಳ್ಳೆಗಳ ಸಂತತಿ ಆಗಲಿದ್ದು, ನೀರು ಸಂಗ್ರಹ ಮೂಲಗಳನ್ನು ಸ್ವಚ್ಛವಾಗಿಟ್ಟಲ್ಲಿ ಸೊಳ್ಳೆಗಳ ಸಂತಾನ ಕಡಿಮೆಯಾಗುತ್ತದೆ ಎಂದರು.
ನಗರಸಭೆ ಆಯುಕ್ತ ಜಹೀರ್ ಅಬ್ಬಾಸ್ ಮಾತನಾಡಿ, ನಗರದ ಎಲ್ಲ ಭಾಗಗಳಲ್ಲಿ ವಾರದಲ್ಲಿ ಒಮ್ಮೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಅರುವು ಮೂಡಿಸಲಾಗುತ್ತದೆ, ಸ್ವಚ್ಛತೆಗೆ ಪೌರ ಕಾರ್ಮಿಕರನ್ನು ನೇಮಿಸಲಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಇದರ ಜವಾಬ್ದಾರಿ ನೋಡಿಕೊಳ್ಳುತಿದ್ದು, ನಗರದ ಎಲ್ಲ ಭಾಗಗಳಲ್ಲಿ ಸೊಳ್ಳೆ ನಾಶಕ ಸಿಂಪಡಿಸಲಾಗುತ್ತಿದೆ. ನಗರದ ಯಾವುದೇ ಭಾಗದಲ್ಲಿ ಸ್ವಚ್ಛತೆ ಸಮಸ್ಯೆ ಕಂಡು ಬಂದಲ್ಲಿ ಕೂಡಲೆ ನಗರಸಭೆಗೆ ಮಾಹಿತಿ ನೀಡಲು ತಿಳಿಸಿದರು.

.