ಜಿಲ್ಲೆ

ಚೌಡೇಶ್ವರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಲಿಂಗದಹಳ್ಳಿ: ಬೀರೂರು ಶೈಕ್ಷಣಿಕ ವಲಯದ ತಣಿಗೆಬೈಲಿನ ಶ್ರೀಚೌಡೇಶ್ವರಿ ಪ್ರೌಢಶಾಲಾ ವಿದ್ಯಾರ್ಥಿಗಳು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದಕ್ಕೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕಠಿಣ ಅಭ್ಯಸವೇ ಕಾರಣ ಎಂದು ಎಸ್‌ಡಿಎಂಸಿ ಅಧ್ಯಕ್ಷ ಟಿ.ಐ.ಪುಟ್ಟೇಗೌಡ ತಿಳಿಸಿದರು.
ಕಡೂರು ತಾಲೂಕಿನ ಜೋಡಿ ಲಿಂಗದಹಳ್ಳಿಯಲ್ಲಿ ನಡೆದ ವಲಯ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ತಣಿಗೆಬೈಲಿನ ಶ್ರೀ ಚೌಡೇಶ್ವರಿ ಪ್ರೌಢಶಾಲಾ ವಿದ್ಯಾರ್ಥಿನಿಯರು ವಾಲಿಬಾಲ್‌ನಲ್ಲಿ ದ್ವಿತೀಯ, ತ್ರಿಪಲ್ ಜಂಪ್‌ನಲ್ಲಿ ವಿದ್ಯಾರ್ಥಿನಿ ಪ್ರತಿಕಾ ದ್ವಿತೀಯ ಸ್ಥಾನ ಪಡೆಯುವ ಮೂಲಕ ಶಾಲೆಗೆ ಕೀತಿ ತಂದಿದ್ದಾರೆ. ದೈಹಿಕ ಶಿಕ್ಷಕರಾದ ಓಂಕಾರಯ್ಯ, ಸಹಶಿಕ್ಷಕರಾದ ಎಸ್.ಎನ್. ನಾಗರಾಜನಾಯ್ಕ, ಕೆ.ಪಾರ್ವತಿ ಇದ್ದರು.