ಜಿಲ್ಲೆ

ಚೌಡೇಶ್ವರಿ ದೇವಿ ರಥೋತ್ಸವ ವೈಭವ

ಎಂ.ರವಿ

ಹಿರೀಸಾವೆ: ಪಟ್ಟಣದ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮಖದಲ್ಲಿ ಬುಧವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.

ಗ್ರಾಮದ ಹೊರ ಭಾಗದ ಕೆರೆ ಏರಿಯ ಮೇಲಿರುವ ದೇವಿಯ ಮೂಲ ದೇಗುಲದಲ್ಲಿ ಬೆಳಗ್ಗೆ ಉತ್ಸವ ಮೂರ್ತಿಗೆ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಯಿತು. ನಂತರ ವಿಶೇಷ ಪೂಜೆಗಳನ್ನು ಸಲ್ಲಿಸಿ, ಭಕ್ತರ ವೇದ ಘೋಷಣೆಗಳು ಮತ್ತು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಗ್ರಾಮಕ್ಕೆ ಕರೆತಂದು ಊರು ಮಧ್ಯದಲ್ಲಿರುವ ಉಯ್ಯಲೆ ಕಂಬದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಅಲಂಕೃತಗೊಂಡಿರುವ ರಥಕ್ಕೆ ಬಲಿ ಅನ್ನವನ್ನು ಅರ್ಪಿಸಲಾಯಿತು. ಭಕ್ತರು ದೇವಿಯನ್ನು ರಥ ಮತ್ತು ಉಯ್ಯಲೆ ಕಂಬದ ಸುತ್ತ ಮೂರು ಸುತ್ತು ಉತ್ಸವ ನಡೆಸಿದರು. ಪುಷ್ಪಾರಗಳಿಂದ ಸಿಂಗರಿಸಿದ್ದ ರಥದ ಮೇಲೆ ಅಮ್ಮನವರನ್ನು ಕೂರಿಸಲಾಯಿತು.

ಪ್ರಧಾನ ಅರ್ಚಕರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಧ್ಯಾಹ್ನ 2 ಗಂಟೆಯಲ್ಲಿ ರಥವನ್ನು ಪೂರ್ವ ದಿಕ್ಕಿಗೆ ಭಕ್ತಿ ಭಾವಗಳಿಂದ ಜನರು ನುಕುನುಗ್ಗಲಿನಲ್ಲಿ ಎಳೆದು ಪುನೀತರಾದರು. ರಥವು ಚಲಿಸುವಾಗ ಭಕ್ತರು ಬಾಳೆಹಣ್ಣಿಗೆ ಧವನವನ್ನು ಸಿಕ್ಕಿಸಿ, ರಥದ ಮೇಲೆ ಎಸೆದರು. ಹರಕೆ ಹೊತ್ತಿದ್ದ ಭಕ್ತರು ಹರಕೆಗಳನ್ನು ಅರ್ಪಿಸಿದರು.

ಹೋಬಳಿಯ ಗಂಗಾಮತಸ್ಥರ ಸಂಘ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸೇರಿದಂತೆ ವಿವಿಧ ಸಂಘಗಳ ವತಿಯಿಂದ ಪಾನಕ ಹಾಗೂ ಫಲಹಾರವನ್ನು ಜಾತ್ರೆಗೆ ಬಂದಿದ್ದ ಜನರಿಗೆ ವಿತರಿಸಿದರು. ರಥೋತ್ಸವವದ ನೇತೃತ್ವವನ್ನು ಗ್ರಾಮದ ಪಟೇಲರ ಮನೆತನದವರು ವಹಿಸಿದ್ದರು. ಧಾರ್ಮಿಕ ವಿಧಿವಿಧಾನಗಳನ್ನು ದೇವಸ್ಥಾನದ ಮುಖ್ಯಸ್ಥರಾದ ಅನಂತರಾಮಯ್ಯ ಮತ್ತು ಧರ್ಮದರ್ಶಿ ಪಣೀಶ್ ನಡೆಸಿಕೊಟ್ಟರು.

ಬೆಳಗೀಹಳ್ಳಿ, ಸೋರೆಕಾಯಿಪುರ, ತೂಬಿನಕೆರೆ, ಹೊನ್ನೇನಹಳ್ಳಿರುವ ದೇವರ ಮನೆತನದವರು ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಶಾಸಕ ಸಿ.ಎನ್.ಬಾಲಕೃಷ್ಣ, ರಾಜ್ಯ ಕವಿಕಾ ಅಧ್ಯಕ್ಷ ಲಲಿತಾರಾಘವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ, ಕಾಂಗ್ರೆಸ್ ಮುಖಂಡರಾದ ಗೋಪಾಲಸ್ವಾಮಿ, ವಿಜಯಕುಮಾರ್, ಜತ್ತೇನಹಳ್ಳಿ ರಾಮಚಂದ್ರು, ಕಿಶೋರ್, ಜೆಡಿಎಸ್ ಮುಖಂಡರಾದ ರಾಮಕೃಷ್ಣ, ರವಿಕುಮಾರ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು