ಜಿಲ್ಲೆ

ಚತುರ್ವಿಂಶತಿ ಲಕ್ಷ ಗಾಯತ್ರಿ ಹವನ

ಇಂದಿರಾ ಎನ್ ಕೆ

ಕುಂದಾಪುರ: ಶ್ರೀ ಕಾಶೀ ಮಠದ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಪಾದರ ಜನ್ಮ ಶತಾಬ್ದಿ ಮಹೋತ್ಸವ, ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ್ಯದ ಸಂದರ್ಭದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮವಾಗಿ ಚತುರ್ವಿಂಶತಿ ಲಕ್ಷ ಗಾಯತ್ರಿ ಹವನ ನಡೆಯಿತು.

ಮೂರು ದಿನಗಳ ಕಾಲ ನಡೆದ ಈ ಯಜ್ಞವು ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ವೈದಿಕರಿಂದ ಗಾಯತ್ರಿ ಮಂತ್ರ ಪಠಣೆಯೊಂದಿಗೆ ಸಮಾಜದ ಸ್ವಯಂಸೇವಕರಿಂದ ಯಜ್ಞಕ್ಕೆ ಆಹುತಿ ನೀಡಲಾಯಿತು.