ಜಿಲ್ಲೆ

ಗುಲಾಬ್‌ಭೂಷಣ್ ಮಹಾರಾಜರ ಚಾತುರ್ಮಾಸ್ಯ : ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾಹಿತಿ

ಮೂಡುಬಿದಿರೆ: ಕುಂಥುಸಾಗರಜಿ ಮಹಾರಾಜರಿಂದ ಆಚಾರ್ಯ ಪದವಿ ಪಡೆದ ಜ್ಞಾನಿ ಆಚಾರ್ಯ 108 ಗುಲಾಬ್ ಭೂಷಣ್ ಮಹಾರಾಜರ ಚಾತುರ್ಮಾಸ್ಯ ಜೈನಮಠದಲ್ಲಿ ನಡೆಯಲಿದೆ ಎಂದು ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜೂನ್ 20ರಂದು ಬೆಳಗ್ಗೆ 8 ಗಂಟೆಗೆ ಮೂಡುಬಿದಿರೆ ಪುರಪ್ರವೇಶ ಮಾಡಲಿರುವ ಮುನಿಮಹರಾಜರನ್ನು ಸಮಾಜದವರು ಬಡಗುಬಸದಿ ಬಳಿ ಸ್ವಾಗತಿಸಿ ಮೆರವಣಿಗೆ ಮೂಲಕ ಜೈನಮಠಕ್ಕೆ ಬರಮಾಡಿಕೊಳ್ಳಲಿದ್ದಾರೆ. ಜುಲೈ 9ರಂದು ಕಲಶ ಪ್ರತಿಷ್ಠಾಪನೆಯ ಮೂಲಕ ಚಾತುರ್ಮಾಸ್ಯ ಆರಂಭವಾಗಲಿದ್ದು, ನಾಲ್ಕು ತಿಂಗಳ ಕಾಲ ನಡೆಯಲಿದೆ. ಈ ವೇಳೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಬಸದಿಗಳ ಮೊಕ್ತೇಸರ ಪಟ್ನಶೆಟ್ಟಿ ಸುಧೇಶ್ ಕುಮಾರ್, ಸ್ವಾಗತ ಸಮಿತಿ ಸಂಚಾಲಕ ಬಾಹುಬಲಿ ಪ್ರಸಾದ್, ಉದ್ಯಮಿ ಶೈಲೇಂದ್ರ ಕುಮಾರ್, ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.