ಬದಿಯಡ್ಕ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಜುಲೈ 10ರಿಂದ ಸೆಪ್ಟೆಂಬರ್ 7ರವರೆಗೆ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಡನೀರು ಮಠದಲ್ಲಿ ಜರುಗಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಊರ ಪರಪೂರ ಭಕ್ತರ ಮಹಾಸಭೆ ಭಾನುವಾರ ಎಡನೀರು ಮಠದಲ್ಲಿ ನಡೆಯಿತು.
ಎಡನೀರು ಶ್ರೀಗಳು ಆಶೀರ್ವಚನ ನೀಡಿ, ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುವ ಚಾತುರ್ಮಾಸ್ಯ ವ್ರತಾಚರಣೆ ಭಗವದನುಗ್ರಹ ಹಾಗೂ ಸಕಲರ ನೆರವಿನೊಂದಿಗೆ ಯಶಸ್ವಿಗೊಳ್ಳಲಿದೆ. ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ, ಭಕ್ತಿಸಾಂಧ್ರತೆಯೊಂದಿಗೆ ಮಂಗಳಕರವಾಗಲಿ ಎಂದು ಕರೆ ನೀಡಿದರು.
ಪ್ರೊ.ಎ.ಶ್ರೀನಾಥ್ ಕಾಸರಗೋಡು, ಮಾಧವ ಹೇರಳ, ಕೆ.ವಿ.ಬಾಲಕೃಷ್ಣನ್, ಅರ್ಜುನ್ ತಾಯಂಗಾಡಿ, ಶಂಕರನಾರಾಯಣ ಭಟ್, ದಿವಾಣ ಶಿವಶಂಕರ ಭಟ್, ಸತೀಶ್ ಎಡನೀರು, ಗಿರೀಶ್ ಮುನಿಯಾಲ, ಹರೀಶ್ ಬಳಂತಿಮೊಗರು, ವಿನಯ, ಪುರುಷೋತ್ತಮ್ ಭಟ್, ಮಹೇಶ ವಳಕ್ಕುಂಜ ಮೊದಲಾದವರು ಮಾತನಾಡಿದರು. ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿದರು. ನಿವೃತ್ತ ವಿದ್ಯಾಧಿಕಾರಿ ವೇಣುಗೋಪಾಲ ವಂದಿಸಿದರು. ಸೂರ್ಯ ಭಟ್ ಎಡನೀರು ಕಾರ್ಯಕ್ರಮ ನಿರೂಪಿಸಿದರು. ವೆಂಕಟ್ ಭಟ್ ಎಡನೀರು ಸಹಕರಿಸಿದರು.