ಹರಪನಹಳ್ಳಿ ತಾಲೂಕಿನ ಚಟ್ನಿಹಳ್ಳಿ ಗ್ರಾಪಂಗೆ ಆಯ್ಕೆಯಾದ ಅಧ್ಯಕ್ಷೆ ಆಶಾ ಸತೀಶ, ಉಪಾಧ್ಯಕ್ಷ ಸಿದ್ದೇಶ್ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಎಸ್. ಮಂಜುನಾಥ್, ಯಶವಂತ ಗೌಡ, ಎಸ್. ಕೆ. ಹನುಮಂತಪ್ಪ, ಕಬ್ಬೂರು ರಾಜಣ್ಣ, ರಂಗಪ್ಪ, ಲೋಕೇಶ್ ಕುಮಾರ್, ಸುರೇಶ್ ನಾಯ್ಕ ಹಾಗೂ ಭೋಜ್ಯನಾಯ್ಕ ಇದ್ದರು. 
ಜಿಲ್ಲೆ

ಚಟ್ನಿಹಳ್ಳಿ ಗ್ರಾಪಂಗೆ ಆಶಾ ಸತೀಶನಾಯ್ಕ ಅಧ್ಯಕ್ಷೆ

ಹರಪನಹಳ್ಳಿ: ತಾಲೂಕಿನ ಚಟ್ನಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಶಾ ಸತೀಶ್ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಸಿದ್ದೇಶ್ ಶನಿವಾರ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಆಶಾ ಸತೀಶ್ ನಾಯ್ಕ 12 ಮತ ಪಡೆದು ಜಯಗಳಿಸಿದರು. 08 ಮತ ಪಡೆದು ಲಲಿತಾ ಬಾಯಿ ಸೋಲು ಕಂಡರು.

ಸಿದ್ದೇಶ್ 10 ಮತ ಪಡೆದು ಗೆಲುವು

ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸಿದ್ದೇಶ್ 10 ಮತ ಪಡೆದು ಗೆಲುವು ಸಾಧಿಸಿದರು. ಬಸವರಾಜ್ 09 ಮತಗಳಿಸಿ ಪರಭಾವಗೊಂಡರು. ಚುನಾವಣೆಯಲ್ಲಿ ಒಂದು ಮತ ತೀರಸ್ಕೃತಗೊಂಡಿದೆ ಎಂದು ಚುನಾವಣಾಧಿಕಾರಿ ಸಿಡಿಪಿಒ ಹರೀಶ್ ಘೋಷಿಸಿದರು.

ಮುಖಂಡರಾದ ಎಸ್. ಮಂಜುನಾಥ್, ಯಶವಂತ ಗೌಡ, ಎಸ್. ಕೆ. ಹನುಮಂತಪ್ಪ, ಕಬ್ಬೂರು ರಾಜಣ್ಣ, ರಂಗಪ್ಪ, ಲೋಕೇಶ್ ಕುಮಾರ್, ಸುರೇಶ್ ನಾಯ್ಕ ಹಾಗೂ ಭೋಜ್ಯನಾಯ್ಕ ಇದ್ದರು.

ಚಿಗಟೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಿ. ನಾಗರಾಜ್

ಚಿಗಟೇರಿ: ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಿ. ನಾಗರಾಜ್ ಹಾಗೂ ಉಪಾಧ್ಯಕ್ಷೆಯಾಗಿ ಹಾಲಮ್ಮ ಬಾರಿಕರ ಶುಕ್ರವಾರ ಅವಿರೋಧವಾಗಿ ಆಯ್ಕೆ ಯಾದರು.

ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾವೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಕಾರ್ತಿಕ್ ಘೋಷಿಸಿದರು. ಪಿಡಿಒ ಟಿ ಅಂಜಿನಪ್ಪ, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

ಅರಸೀಕೆರೆ: ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎ. ಇನಾಯತ್ ಉಲ್ಲಾ (ರೆಡ್ಡಿ), ಉಪಾಧ್ಯಕ್ಷೆಯಾಗಿ ವಿ.ಲಕ್ಷ್ಮೀ ವೆಂಕಟೇಶ್ ಆಯ್ಕೆಯಾದರು. ಚುನಾವಣೆಯಲ್ಲಿ 16 ಜನ ಸದಸ್ಯರು ಹಕ್ಕನ್ನು ಚಲಾಯಿಸಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎ. ಇನಾಯತ್ ಉಲ್ಲಾ (ರೆಡ್ಡಿ) 10 ಮತ ಪಡೆದು ಜಯಗಳಿದರು. ಎಮ್. ಚಂದ್ರಪ್ಪ 05 ಮತ ಪಡೆದು ಪರಾಜಿತರಾದರು. 01 ಮತ ತೀರಸ್ಕೃತಗೊಂಡಿತು.

ಉಪಾಧ್ಯಕ್ಷರಾಗಿ ವಿ.ಲಕ್ಷ್ಮೀ ವೆಂಕಟೇಶ್ 11 ಮತ ಪಡೆದು ಗೆಲುವು ಸಾಧಿಸಿದರು. 05 ಮತ ಪಡೆದು ಟಿ. ವಿಶಾಲ ಸೋತರು ಎಂದು ಚುನಾವಣಾಧಿಕಾರಿ ಯು. ಬಸವರಾಜ್ ಘೋಷಿಸಿದರು.

ಮುಖಂಡರಾದ ವೈ.ಡಿ. ಅಣ್ಣಪ್ಪ, ಪ್ರಶಾಂತ್ ಪಾಟೀಲ್, ವೈ. ಟಿ. ಕೊಟ್ರೇಶ್, ಜೆ. ಪರುಶುರಾಮ್, ವಿ. ವೆಂಕಟೇಶ್, ಹಾಲೇಶ್, ನಜೀರ್ ಸಾಹೇಬ್, ಮಹಮ್ಮದ್ ಸಾಹೇಬ್, ಹೆಚ್. ನವೀನ್, ನಾಗರಾಜ್, ಕೆಂಚಪ್ಪ, ಲಕ್ಷ್ಮಣ್, ಪಿಡಿಒ ಅಂಜಿನಪ್ಪ ಹಾಗೂ ಗ್ರಾಪಂ ಸದಸ್ಯರಿದ್ದರು.