ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಸನಾತನ ಹಿಂದು ಧರ್ಮದ ಉಳಿವು, ಸಂಸ್ಕೃತಿ, ಸಂಸ್ಕಾರಗಳ ರಕ್ಷಣೆಗಾಗಿ ಹಿಂದು ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಪಡುಕುತ್ಯಾರು ಶ್ರೀ ಸರಸ್ವತಿ ಸತ್ಸಂಗ ಮಂದಿರದಲ್ಲಿ ಬುಧವಾರ ಕಟಪಾಡಿ ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದ ಶ್ರೀಗಳ 20ನೇ ವರ್ಷದ ಚಾತುರ್ಮಾಸ್ಯ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಪಡುಕತ್ಯಾರಿನ ಸಂಸ್ಥಾನದಲ್ಲಿ ವಿಶ್ವಕರ್ಮ ಮ್ಯೂಸಿಯಂ ಸ್ಥಾಪಿಸಿ ಅಲ್ಲಿ ಪಾರಂಪರಿಕ ಶಿಲ್ಪ, ಆಧುನಿಕ ಶಿಲ್ಪಕಲೆಗಳ ಅಧ್ಯಯನ ಮತ್ತು ಸಂಶೋಧನೆಗೆ ಅವಕಾಶ ಮಾಡಿಕೊಡುವ ಚಿಂತನೆಯಿದೆ ಎಂದರು.
ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ, ಮಠದ ಆಸ್ಥಾನ ವಿದ್ವಾಂಸ ಶಂಕರಾಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ, ಜಿ.ರಾಮಕೃಷ್ಣ ಆಚಾರ್ಯ ಮೂಡುಬಿದಿರೆ ಮಾತನಾಡಿದರು. ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಮುಖಂಡ ಸಂಜಯ್ ಪ್ರಭು, ಡಾ.ಬಿ.ಎಂ.ಉಮೇಶ್ ಕುಮಾರ್, ಎಸ್.ಆರ್.ಹರೀಶ್ ಆಚಾರ್ಯ ಜಲಕದಕಟ್ಟೆ, ಪಿ.ವಿ.ಗಂಗಾಧರ ಆಚಾರ್ಯ ಉಡುಪಿ, ದಿನೇಶ್ ಆಚಾರ್ಯ ಪಡುಬಿದ್ರಿ, ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಗಣೇಶ್ ಆಚಾರ್ಯ ಕೆಮ್ಮಣ್ಣು, ಬೆಳುವಾಯಿ ಸುಂದರ ಆಚಾರ್ಯ, ರಮಾ ಆಚಾರ್ಯ ಉಡುಪಿ, ಮಧು ಆಚಾರ್ಯ ಮೂಲ್ಕಿ, ಸುಧಾಕರ್ ಆಚಾರ್ಯ ತ್ರಾಸಿ, ಶಿಲ್ಪಿ ರಾಮಚಂದ್ರ ಆಚಾರ್ಯ, ಚಂದ್ರಯ್ಯ ಆಚಾರ್ಯ ಕಳಿ, ಪುರೋಹಿತ್ ಜಯಕರ ಆಚಾರ್ಯ, ಮಧುಕರ ಚಂದ್ರಶೇಖರ ಆಚಾರ್ಯ, ಸುಧಾಕರ ಆಚಾರ್ಯ ಕೊಲಕಾಡಿ, ಸುಬ್ರಾಯ ಆಚಾರ್ಯ, ಸುಂದರ ಆಚಾರ್ಯ ಕೋಟೆಕಾರು, ಬಿ.ಎಂ.ಯದುನಂದನ ಆಚಾರ್ಯ, ಜನಾರ್ದನ ಆಚಾರ್ಯ, ವಕೀಲ ಕೆ.ಪ್ರಭಾಕರ ಆಚಾರ್ಯ, ಚಂದ್ರಯ್ಯ ಆಚಾರ್ಯ ಕೋಟೇಶ್ವರ, ಜಗದೀಶ್ ಆಚಾರ್ಯ, ನಾಗರಾಜ ಹಾವನೂರು, ಜಿ.ಟಿ.ಆಚಾರ್ಯ ಮುಂಬೈ ಉಪಸ್ಥಿತರಿದ್ದರು. ಲೋಕೇಶ್ ಎಂ.ಬಿ.ಆಚಾರ್, ಕಂಬಾರು ಸ್ವಾಗತಿಸಿದರು. ಗೀತಾಚಂದ್ರ ಆಚಾರ್ಯ ಕಾರ್ಕಳ, ಕೆ.ಎಂ.ಗಂಗಾಧರ್ ಆಚಾರ್ಯ, ಮೌನೇಶ್ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಅರವಿಂದ ವೈ.ಆಚಾರ್ಯ ಬೆಳುವಾಯಿ ವಂದಿಸಿದರು.