ಜಿಲ್ಲೆ

ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆ: ಸದ್ವಿದ್ಯಾ ಕಾಲೇಜು ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

ಮಂಡ್ಯ: ಕಳೆದ ಡಿಸೆಂಬರ್‌ನಲ್ಲಿ ನಡೆದ ಚಾರ್ಟೆಡ್ ಅಕೌಂಟೆಂಟ್ ಸ್ಪರ್ಧಾತ್ಮಕ ಪರೀಕ್ಷೆ ಮೊದಲ ಹಂತವಾದ ಸಿ.ಎ ಫೌಂಡೇಷನ್‌ನ ಪರೀಕ್ಷೆಯಲ್ಲಿ ಇಲ್ಲಿನ ಕಾವೇರಿನಗರದ ಸದ್ವಿದ್ಯಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ಉತೀರ್ಣರಾದ ಸಧನೆ ಮಾಡಿದ್ದಾರೆ.

ಎನ್.ದೀಪ್ತಿಶ್ರೀ 400 ಅಂಕಕ್ಕೆ 294, ಎಸ್.ಪ್ರಾಚಿ 280 ಅಂಕದೊಂದಿಗೆ ಅತ್ಯುನ್ನತ ಶ್ರೇಣಿ ಪಡೆದುಕೊಂಡಿದ್ದಾರೆ. ಅಂತೆಯೇ ತನಿಷ್ ಕೆ.ಜೈನ್ 232 ಹಾಗೂ ಮಹಮದ್ ಕಮ್ರನ್ 206 ಅಂಕ ಗಳಿಸಿದ್ದಾರೆ. ಈ ಮೂಲಕ ಜಿಲ್ಲೆ ಹಾಗೂ ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳನ್ನು ಸದ್ವಿದ್ಯಾ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಎಂ.ಕೆ.ಹರೀಶ್‌ಕುಮಾರ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಎಚ್.ಕೆ.ಶಿವಕುಮಾರ್, ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.