ಜಿಲ್ಲೆ

ಮಂಜಿನಿಂದ ರಸ್ತೆ ಕಾಣದೆ ಅಪಘಾತ

Mangaluru - Nishantha Narayana

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಸೋಮನಕಾಡು ನೀರಿನ ಫಾಲ್ಸ್ ಸಮೀಪ ಶುಕ್ರವಾರ ತಡರಾತ್ರಿ ರಸ್ತೆ ಅಪಘಾತವಾಗಿದೆ.

ವಿಪರೀತ ಮಂಜಿನ ಕಾರಣದಿಂದ ರಸ್ತೆ ಕಾಣದೆ ರಸ್ತೆಯ ಬದಿಯಲ್ಲಿರುವ ತಡೆಗೋಡೆಗೆ ಡಿಕ್ಕಿ ಹೊಡೆದ ಲಾರಿಯೊಂದು ಪ್ರಪಾತಕ್ಕೆ ಉರುಳಿದ ಪರಿಣಾಮ ಚಾಲಕ ಹಾಗೂ ನಿರ್ವಾಹಕ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಲಾರಿ ಉರುಳಿ ಪ್ರಪಾತದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು ಅಲ್ಲೇ ನಿಂತಿದೆ.