ಜಿಲ್ಲೆ

ತಪೋಭೂಮಿಯಲ್ಲಿ ಚರಿತ್ರೆ ಪಠಣ

Dharwada - Basavaraj Idli

ಹುಬ್ಬಳ್ಳಿ: ಸಮೀಪದ ತಡಸ ಕ್ರಾಸ್ ನಲ್ಲಿರುವ ಶ್ರೀ ಗಾಯತ್ರಿ ತಪೋಭೂಮಿಯಲ್ಲಿ ಜುಲೈ 20ರಂದು ಬೆಳಗ್ಗೆ 7ಕ್ಕೆ 108 ಭಕ್ತರಿಂದ ಪರಮ ಪವಿತ್ರ ಶ್ರೀ ಕೃಷ್ಣೆಂದ್ರ ಸ್ವಾಮಿಗಳ ಚರಿತ್ರೆಯ ಸಾಮೂಹಿಕ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಭಕ್ತರ ಸಂಕಲ್ಪದಂತೆ ಶ್ರೀ ವಲ್ಲಭ ಚೈತನ್ಯರು ಹಾಗೂ ಮಾತೆ ಗಾಯತ್ರಿದೇವಿಯ ಸಮಕ್ಷಮ ಪಠಣ ಮಾಡಿ ನಂತರ ಶ್ರೀ ಕೃಷ್ಣೆಂದ್ರ ಗುರುಗಳ ಪಾದಾರವಿಂದಕ್ಕೆ ಸಮರ್ಪಣೆ ಮಾಡಲಾಗುವುದು.

ಶ್ರೀ ಗುರು ಭಕ್ತವೃಂದದಿಂದ ಲೋಕ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಈ ಪಠಣದಲ್ಲಿ ಪುರುಷ- ಮಹಿಳೆಯರು ಎಲ್ಲರೂ ಭಾಗವಹಿಸಬಹುದು.

ಭಕ್ತರು ಸ್ವಯಂ ಪ್ರೇರಣೆಯಿಂದ ಶ್ರೀ ಕೃಷ್ಣೆಂದ್ರ ಗುರುಗಳ ಚರಿತ್ರೆ ಪುಸ್ತಕ ತರಲು ಕೋರಲಾಗಿದೆ.
ಜು. 21ರಂದು ತಪೋಭೂಮಿಯಲ್ಲಿ ಪ್ರತಿ ವರ್ಷದಂತೆ ಗುರುಪೂರ್ಣಿಮೆ ಆಚರಣೆ ನಡೆಯಲಿದೆ.