ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ನವೀಕೃತಗೊಂಡ ರಜತ ರಥವನ್ನು ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಭಾನುವಾರ ಕಳಶಾಭಿಷೇಕ ನೆರವೇರಿಸುವ ಮೂಲಕ ರಾಯರಿಗೆ ಸಮರ್ಪಿಸಿದರು.  
ಜಿಲ್ಲೆ

ರಾಯರಿಗೆ ರಜತ ರಥ ಸಮರ್ಪಣೆ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ನವೀಕೃತಗೊಂಡ ರಜತ ರಥವನ್ನು ಭಾನುವಾರ ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ರಾಯರಿಗೆ ಸಮರ್ಪಣೆ ಮಾಡಿದರು.
ಈ ಹಿಂದೆ ಇದ್ದ ರಜತ ರಥ ಹಳೆಯದಾಗಿದ್ದರಿಂದ ಅದನ್ನು ಪುನಃ ನೂರಾರಿ ಕೆಜಿ ಬೆಳ್ಳಿಯನ್ನು ಉಪಯೋಗಿಸಿ ನವೀಕೃತಗೊಳಿಸುವ ಮೂಲಕ ಭಕ್ತರು ರಾಯರಿಗೆ ರಥೋತ್ಸವ ಸೇವೆ ನಡೆಸಲು ಅನುಕೂಲ ಮಾಡಿಕೊಡಲಾಗಿದೆ.
ಶ್ರೀಗಳು ರಥ ಕಳಸಕ್ಕೆ ಅಭಿಷೇಕ, ಪೂಜೆ ಹಾಗೂ ಆರತಿ ನೆರವೇರಿಸಿ ನವೀಕೃತ ರಥವನ್ನು ರಾಯರಿಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ವೆಂಕಟೇಶ ಜೋಷಿ ಹಾಗೂ ಭಕ್ತರು ಉಪಸ್ಥಿತರಿದ್ದರು.