ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಭಾನುವಾರ ಮಧ್ಯಾಹ್ನ ನಡೆದ ರಥಾರೋಹಣ.  
ಜಿಲ್ಲೆ

ಪೆರ್ಡೂರು ದೇವಳ ರಥಾರೋಹಣ

Karthika K.S

ಹೆಬ್ರಿ: ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನ ವಾರ್ಷಿಕ ಜಾತ್ರೆ ಅಂಗವಾಗಿ ಭಾನುವಾರ ರಥಾರೋಹಣ ನಡೆಯಿತು.

ಕ್ಷೇತ್ರದ ತಂತ್ರಿ ಕೆ.ಜಿ.ವಿಠ್ಠಲ ತಂತ್ರಿ ಹಾಗೂ ಅರ್ಚಕ ಪಿ.ಕೃಷ್ಣ ಅಡಿಗ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಕಾರ್ಯಕ್ರಮ ನಡೆದವು. ದೇವರಿಗೆ ಭಾನುವಾರ ಪ್ರಧಾನ ಹೋಮ, ಕಲಶಾಭಿಷೇಕ, ರಥಹೋಮ, ರಥಸಂಪ್ರೋಕ್ಷಣೆ, ಕೊಡಿ ಪೂಜೆ, ಮಹಾಪೂಜೆ, ಮಧ್ಯಾಹ್ನ ರಥಾರೋಹಣ, ಶ್ರೀ ಮನ್ಮಹಾರಥೋತ್ಸವ, ದೀವಟಿಕೆ ಸಲಾಮ್, ನರ್ತನ, ವಾದ್ಯ ಸೇವಾದಿಗಳು, ಹಚ್ಚಡ ಸೇವೆ, ರಥಾವರೋಹಣ, ಪಲ್ಲಕ್ಕಿ ಸುತ್ತು, ತೆಪ್ಪೋತ್ಸವ, ವಾಲಗ ಮಂಟಪ ಪೂಜೆ, ವೇದಪಾರಾಯಣ, ಸಂಗೀತ, ವಾದ್ಯ, ನರ್ತನ ಸೇವೆ, ಮಹಾಪೂಜೆ, ಮಹಾಪೂಜೆ, ಶ್ರೀಭೂತಬಲಿ, ಕವಾಟಬಂಧನ, ಶಯನೋಲಗ ನಡೆಯಿತು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಕಾರ್ಯನಿರ್ವಹಣಾಧಿಕಾರಿ ಗುರುರಾಜ್ ಪಿ.ಆರ್., ಅರ್ಚಕ ಕೃಷ್ಣ ಅಡಿಗ, ಸಮಿತಿ ಸದಸ್ಯರಾದ ರಾಜಕುಮಾರ್ ಶೆಟ್ಟಿ ದೊಡ್ಮನೆ, ದಿನೇಶ್ ಪೂಜಾರಿ ಗರಡಿ ಮನೆ, ಸಂತೆಕಟ್ಟೆ ರಾಮದಾಸ್ ನಾಯ್ಕ ಬುಕ್ಕಿಗುಡ್ಡೆ, ಲಲಿತಾಂಬ ಆನಂದ ಗೌಡ ಕುಕ್ಕುಂಜಾರು ಜೋಗಿ ಬೆಟ್ಟು, ರಾಮ ಕುಲಾಲ್ ಪಕ್ಕಾಲ್, ರಂಜಿತ್ ಪ್ರಭು ಬುಕ್ಕಿಗುಡ್ಡೆ, ಶಾಂತಾ ಆರ್.ಶೆಟ್ಟಿ ವಡ್ಡಮೇಶ್ವರ ಭಾಗವಹಿಸಿದ್ದರು.

ಇಂದು ಚಂದ್ರಮಂಡಲ ರಥ

ಮಾ.17ರಂದು ಮುಖದಾನ, ಕವಾಟೋದ್ಘಾಟನೆ, ಅಷ್ಟಾವಧಾನ ಸೇವೆಗಳು, ಅಂಕುರ ಪ್ರಸಾದ ವಿತರಣೆ, ಭಕ್ತರ ತುಲಾಭಾರಾದಿ ಸೇವೆಗಳು, ಕೊಡೆ ನೀರು, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ದೀವಟಿಕೆ ಸಲಾಮ್, ಕೊಡಿಪೂಜೆ, ವಾಲಗಮಂಟಪ ಪೂಜೆ, ಓಕುಳಿ, ತೀರ್ಥಯಾತ್ರ ಬಲಿ, ಅವಕೃಥ ಸ್ನಾನ, ಆರಾಟೋತ್ಸವ, ಸೂಟೆಬಲಿ, ಪೂರ್ಣಾಹುತಿ, ಮಂತ್ರಾಕ್ಷತೆ, ಧ್ವಜಾವರೋಹಣ, ಮಹಾಪೂಜೆ, ನಿತ್ಯಬಲಿ, ದೊಡ್ಡರಂಗಪೂಜೆ, ರಂಗಪೂಜೆ ಬಲಿ, ಚಂದ್ರಮಂಡಲ ರಥ ನಡೆಯಲಿದೆ.