ಸಜ್ಜಲಗುಡ್ಡದ ಶರಣಮ್ಮ ಮಹಾತಾಯಿ ಮಠದಲ್ಲಿ ಮಹಾರಥೋತ್ಸವದ ಸೇವೆಯಲ್ಲಿ ತೊಡಗಿರುವ ಇಳಕಲ್ ಮೂಲದ ಹೀನಾ, ತಾಜುದ್ದೀನ್ ದಂಪತಿ. 
ಜಿಲ್ಲೆ

ಮುಸ್ಲಿಂ ದಂಪತಿಯಿಂದ ರಥೋತ್ಸವ ಸೇವೆ

ಮುದಗಲ್: ಸಮೀಪದ ಸಜ್ಜಲಗುಡ್ಡದ ಸಜ್ಜಲಾಂಬೆ ಶರಣಮ್ಮ ಮಹಾತಾಯಿ ಮಠ ಭಾವೈಕ್ಯಕ್ಕೆ ಸಾಕ್ಷಿಯಾಗಿದೆ. ಮುದಗಲ್, ಇಳಕಲ್, ಬಾಗಲಕೋಟೆ, ವಿಜಯಪುರ ಹಾಗೂ ರಾಯಚೂರು ನಗರ ಮತ್ತು ಗ್ರಾಮೀಣ ಭಾಗಗಳಿಂದ ಮುಸಲ್ಮಾನರು ಮಠಕ್ಕೆ ಆಗಮಿಸಿ ಗದ್ದುಗೆ ದರ್ಶನ ಪಡೆದು ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಇಳಕಲ್ ಮೂಲದ ಹೀನಾ ಹಾಗೂ ತಾಜುದ್ದೀನ್ ದಂಪತಿ ಇತ್ತೀಚಿಗೆ ಶ್ರೀಮಠದ ಪ್ರಾಂಗಣದಲ್ಲಿ ಹಿಂದು ಧಾರ್ಮಿಕ ಪದ್ಧತಿಯಂತೆ ಪೂಜೆ ನೆರವೇರಿಸಿ ರಥೋತ್ಸವ ಸೇವೆ ಮಾಡಿದರು. ಕಳೆದ 18 ವರ್ಷಗಳಿಂದಲೂ ಶ್ರೀಮಠದ ಆಶೀರ್ವಾದ ಪಡೆದು ಸೇವೆ ಸಲ್ಲಿಸುತ್ತಿದ್ದು, ಶರಣಮ್ಮ ತಾಯಿ ಶಕ್ತಿ ನಮ್ಮನ್ನು ರಕ್ಷಿಸುತ್ತದೆ ಎಂದು ಹೀನಾ ಇಳಕಲ್ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.