ಜಿಲ್ಲೆ

'ದ್ವೇಷ ರಾಜಕಾರಣಕ್ಕಾಗಿ ಸಿದ್ದರಾಮಯ್ಯ ವಿರುದ್ಧ ಆರೋಪ'

ಆರ್.ಕೃಷ್ಣ

ಮೈಸೂರು: ಮುಡಾ ಶೇ.50:50 ಅನುಪಾತದ ನಿವೇಶನ ಹಂಚಿಕೆ ಸೂತ್ರ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಪ್ರಾರಂಭವಾಗಿದ್ದು. ದ್ವೇಷ ರಾಜಕಾರಣಕ್ಕಾಗಿ ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ ಎಂದು ಕಾಂಗ್ರೆಸ್ ನಗರ ಘಟಕದ ವಕ್ತಾರ ಎಸ್.ರಾಜೇಶ್ ದೂರಿದರು.
ಮುಖ್ಯಮಂತ್ರಿ ರಾಜೀನಾಮೆ ಕೇಳುವ ಬಿಜೆಪಿಗರು ತಮ್ಮ ಅವಧಿಯಲ್ಲಿ ನಡೆದ ಬಿಟ್ ಕಾಯಿನ್, ಪಿಎಸ್‌ಐ, ಎಂಎಸ್‌ಎಎಲ್ ಹಗರಣಗಳ ಬಗ್ಗೆ ಏಕೆ ಮಾತನಾಡಲಿಲ್ಲ? ವಿರೋಧ ಪಕ್ಷದ ನಾಯಕ ಅಶೋಕ್ ಅಕ್ರಮ- ಸಕ್ರಮದ ಹಗರಣ ನಡೆಸಿದ್ದು, ತನಿಖೆಯಾಗದಂತೆ ಕೋರ್ಟ್‌ನಿಂದ ಸ್ಟೇ ತಂದಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡರ ವಿರುದ್ಧ ಸಾಕಷ್ಟು ಆರೋಪ ಕೇಳಿ ಬರುತ್ತಿದೆ, ರಘು ಕೌಟಿಲ್ಯ ಸಿ.ಎ.ನಿವೇಶನ ಪಡೆದ ರೀತಿಯ ಬಗ್ಗೆಯೂ ಮಾತನಾಡಲಿ ಎಂದರು. ಕಾಂಗ್ರೆಸ್ ಜಿಲ್ಲಾ ಸಮಿತಿ ವಕ್ತಾರ ಶ್ರೀನಿವಾಸ ಗೌಡ, ಮುಖಂಡರಾದ ಎಸ್.ಎ.ರಹೀಂ, ರವಿ ಇದ್ದರು.