ಗೊಳಸಂಗಿ: ಗ್ರಾಮ ಸೇರಿದಂತೆ ಮುತ್ತಗಿ, ನಾಗವಾಡ, ಗೊಳಸಂಗಿ, ಹಂಗರಗಿ, ಮುಕಾರ್ತಿಹಾಳ, ಬುದ್ನಿ, ಬೀರಲದಿನ್ನಿ, ಹುಣಶಾಳ-ಪಿಸಿ, ವಂದಾಲ, ಉಣ್ಣಿಬಾವಿ, ತೆಲಗಿ, ಅಂಗಡಗೇರಿ, ಕೂಡಗಿ, ಮಸೂತಿ, ತಳೇವಾಡ, ಅರಷಣಗಿ ಗ್ರಾಮಗಳ ಕೃಷಿಕರು ಸೋಮವಾರ ಭೂಮಾತೆಗೆ ಪೂಜೆ ಸಲ್ಲಿಸಿ ಎಳ್ಳ ಅಮಾವಾಸ್ಯೆ ಸಂಭ್ರಮದಿಂದ ಆಚರಿಸಿದರು.
ಫಲವತ್ತಾಗಿ ಬೆಳೆದು ನಿಂತ ಹಿಂಗಾರು ಹಂಗಾಮಿನ ಜೋಳ, ಕಡಲೆ, ಮೆಕ್ಕೆಜೋಳ, ಗೋಧಿ, ಈರುಳ್ಳಿ, ತೊಗರಿ ಮೊದಲಾದ ಬೆಳೆಗಳಿಗೆ ಪೂಜೆ ಸಲ್ಲಿಸಿ ಅನ್ನದಾತರು ಸಂತೃಪ್ತ ಭಾವ ಮೆರೆದರು.
ಹುಲ್ಲು ಹುಲ್ಲಿಗೋ ಚೆಲ್ಲ ಚೆಲ್ಲಂಬರಿಗೋ.. ಎಂದು ಹೇಳುತ್ತ್ತ ಭೂ ತಾಯಿಗೆ ಚರಗ ಚೆಲ್ಲಿದರು.ಬಳಿಕ ಪರಿವಾರ ಮತ್ತು ಸ್ನೇಹಿತರೊಂದಿಗೆ ಸಜ್ಜೆ ರೊಟ್ಟಿ, ಎಳ್ಳು ಹೋಳಿಗೆ ಹಾಗೂ ವಿವಿಧ ತರಹದ ಅಡುಗೆ ಭೋಜನ ಮಾಡಿದರು.
ತಲೆ ತಲಾಂತರದಿಂದ ಚರಗ ಚೆಲ್ಲುವ ಹಬ್ಬವನ್ನು ನಮ್ಮ ಪೂರ್ವಜರು ಆಚರಿಸುತ್ತ ಬಂದಿರುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಎಳ್ಳ ಅಮಾವಾಸ್ಯೆ ಹೊತ್ತಿಗೆ ಹಿಂಗಾರು ಪೈರು ಅನ್ನದಾತರ ಬೆವರಿನ ಲವಾಗಿ ಬೆಳೆದು ನಿಂತಿರುತ್ತದೆ. ಈ ಸಂದರ್ಭದಲ್ಲಿ ಸೀಮಂತ ಮಾದರಿಯಲ್ಲಿ ಚರಗ ಚೆಲ್ಲುವುದರಿಂ ಉತ್ತಮ ಸಲು ರೈತರ ಕೈ ಸೇರುತ್ತದೆ ಎಂಬ ನಂಬಿಕೆ ರೈತರದ್ದಾಗಿದೆ. -ರಾವುತ ಸೀಮಿಕೇರಿ, ಗ್ರಾಪಂ ಅಧ್ಯಕ್ಷರು ಗೊಳಸಂಗಿ