ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾAತ್ ನೇತೃತ್ವದಲ್ಲಿ ಪೌರ ಕಾರ್ಮಿಕರಿಗೆ ಬಾಗಿನ ನೀಡಲಾಯಿತು. ನಾಗರಾಜ ಕಂಕಾರಿ, ಗೋವಿಂದಪ್ಪ, ಪಾಲಾಕ್ಷಿ, ದಿವ್ಯಾ ಪ್ರವೀಣ್ ಮುಂತಾದವರಿದ್ದರು. 
ಜಿಲ್ಲೆ

ಬಣ್ಣ ಹಚ್ಚಿದ ಮೇಲೆ ಪಾತ್ರ ಮಾಡಲೇಬೇಕು: ಎಂ.ಶ್ರೀಕಾAತ್

Shivamogga - Desk - Megha MS

ಶಿವಮೊಗ್ಗ: ಬಡವರ ಹಿತಕ್ಕಾಗಿ ರಾಜಕಾರಣ ಮಾಡಬೇಕು. ಚುನಾವಣೆಯಲ್ಲಿ ಸೋಲುಂಡಾಗ ಇನ್ನು ಮುಂದೆ ರಾಜಕಾರಣ ಮಾಡಬಾರದೆಂದು ತೀರ್ಮಾನಿಸಿದ್ದೆ. ಬಣ್ಣ ಹಚ್ಚಿದ ಮೇಲೆ ಪಾತ್ರ ಮಾಡಬೇಕಾದ್ದು ಅನಿವಾರ್ಯ. ಈಗ ಬದಲಾವಣೆ ಬಯಸಿದ್ದೇನೆ. ಇನ್ನು 15 ದಿನಗಳಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದೇನೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾAತ್ ತಿಳಿಸಿದರು.

ಸದ್ಭಾವನಾ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ನಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪೌರ ಮಹಿಳಾ ಕಾರ್ಮಿಕರಿಗೆ ಗೌರಿ ಹಬ್ಬದ ಅಂಗವಾಗಿ ಬಾಗಿನ ನೀಡಿದ ಬಳಿಕ ಮಾತನಾಡಿ, ಅಽಕಾರ ಇಲ್ಲದಿದ್ದರೂ ಬಡವರ ಸೇವೆ ಮಾಡುತ್ತಿದ್ದೇನೆ. ಸ್ವಾರ್ಥಕ್ಕಾಗಿ ರಾಜಕಾರಣ ಮಾಡಬಾರದು ಎಂದು ನಂಬಿದವನು ನಾನು. ಪ್ರತಿ ದಿನ ವಿವಿಧ ಕೆಲಸಕ್ಕೆಂದು ಜನರು ನನ್ನ ಬಳಿ ಬರುತ್ತಾರೆ. ಅವರ ಕೆಲಸ ಮಾಡುವುದಕ್ಕಾದರೂ ಅಽಕಾರ ಬೇಕು ಎಂದರು.
ಪೌರ ಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಸ್ವಚ್ಛತೆಗಾಗಿ ಶ್ರಮಿಸುವ ಪೌರ ಕಾರ್ಮಿಕರ ಕಾಯಕ ನಿರಂತರವಾದ್ದು. ನನಗೆ ಪೌರ ಕಾರ್ಮಿಕರ ಒಡನಾಟ ಮತ್ತು ಅವರ ಕಷ್ಟದ ಅರಿವಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಬಾಗಿನ ನೀಡುವ ಕಾರ್ಯ ಮಾಡುತ್ತಿದ್ದೇನೆ ಎಂದು ಹೇಳಿದರು.
ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಗೋವಿಂದಪ್ಪ ಮಾತನಾಡಿದರು. ಮಾಜಿ ಮೇಯರ್ ಪಾಲಾಕ್ಷಿ, ನಗರ ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ, ಜೆಡಿಎಸ್ ಪ್ರಮುಖರಾದ ದಿವ್ಯಾ ಪ್ರವೀಣ್ ಇತರರಿದ್ದರು.