ಜಿಲ್ಲೆ

ಚಾರಿತ್ರ ನಿರ್ಮಾಣ ಶಿಕ್ಷಣದ ಉದ್ದೇಶ

ಎಂ.ಎಸ್​.ಹಿರೇಮಠ ಬೆಳಗಾವಿ

ಕಟಕೋಳ: ಕ್ರೀಡೆ ಕೇವಲ ಪದಕ ಮತ್ತು ಪ್ರಶಸ್ತಿ ಸಂಪಾದನೆಗೆ ಸೀಮಿತವಲ್ಲ. ನಮ್ಮ ಬದುಕು ರೂಪಿಸಿಕೊಳ್ಳಲು ಸಹ ಅನುಕೂಲವಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ನಿವತ್ತ ರಿಜಿಸ್ಟ್ರಾರ್​ ಸುಂದರ ರಾಜ್​ ಅರಸ್​ ಹೇಳಿದರು.

ಸಮೀಪದ ಚಂದರಗಿಯ ಎಸ್​.ಎಂ. ಕಲೂತಿ ಸಂಯುಕ್ತ ಕ್ರೀಡಾವಸತಿ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ರೀಡಾಪಟುಗಳಿಗೆ ಸೋಲು, ದು@ಖ ಸಾಮಾನ್ಯ. ಆದರೆ, ಪರಿಶ್ರಮ, ತ್ಯಾಗ, ಸಮರ್ಪಣಾ ಭಾವ ಅಳವಡಿಸಿಕೊಂಡರೆ ಸಾಧನೆ ನಿಲುಕುತ್ತದೆ. ಉತ್ತಮ ವಾತಾವರಣ, ಸೂಕ್ತ ತರಬೇತಿ ಮತ್ತು ಸತ್ವಭರಿತ ಊಟ ನೀಡಿ ಕ್ರೀಡಾಪಟುಗಳನ್ನು ಹುಟ್ಟು ಹಾಕುವ ಚಂದರಗಿ ಶಾಲೆ ದೇಶಕ್ಕೆ ಶ್ರೇಷ್ಠ ಕೊಡುಗೆ ನೀಡುತ್ತಿದೆ ಎಂದು ಶ್ಲಾಘಿಸಿದರು.

ಸ್ಪೋಕೋ ಸಂಸ್ಥೆಯ ಸಂಸ್ಥಾಪಕ ಎಸ್​.ಎಂ. ಕಲೂತಿ, ಧಾರವಾಡದ ನಿವತ್ತ ದೆಹಿಕ ಶಿಣ ನಿರ್ದೇಶಕ ವಿ.ಟಿ. ಕುರ್ತಕೋಟಿ, ಆರ್​. ಕೆ. ಪಡತಾರೆ, ಎಂ.ಜಿ. ಮರನೂರ, ವ್ಯವಸ್ಥಾಪಕ ಜೆ.ಬಿ. ಮೇಟಿ, ಜೆ.ವಿ. ಮುರಗೋಡ, ಪ್ರಾಚಾರ್ಯರಾದ ಸತೀಶ ಪಾಟೀಲ, ಪಿ.ಕೆ. ಪಾಟೀಲ, ಐ.ಎಸ್​. ಸೂಳಿಭಾವಿ ಹಾಗೂ ಮುಖ್ಯ ತರಬೇತುದಾರ ಗೋಪಾಲ ಅಪ್ಪಿನಬೆಲ್​, ಶಿಕಿ ರಶ್ಮಿ ಗೌಡರ ಇತರರಿದ್ದರು.