ಹೆಬ್ರಿ: ಗ್ರಾಪಂ ದಾಖಲೆಗಳು ಪಾರದರ್ಶಕವಾಗಿ ಇದೆಯೋ, ಇಲ್ಲವೋ ಎಂಬುವುದನ್ನು ಗುರುತಿಸಲು ಜಮಾಬಂದಿ ಕೈಗನ್ನಡಿ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ಬಿ.ವಿ. ಹೇಳಿದರು.
ಸೋಮವಾರ ಚಾರ ಗ್ರಾಪಂ ಜಮಾಬಂದಿ ಕಾರ್ಯಕ್ರಮದಲ್ಲಿ ಲೆಕ್ಕಪತ್ರ ಪರಿಶೀಲಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ದಿನೇಶ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಕೃಷ್ಣನಾಯ್ಕ, ಪಿಡಿಒ ಅಶೋಕ್, ಗ್ರಾಪಂ ಸದಸ್ಯರು, ಸಾರ್ವಜನಿಕರಿದ್ದರು.