ಜಿಲ್ಲೆ

ಚಾರ ದೇವಳ ಜಾತ್ರಾಮಹೋತ್ಸವ

ಇಂದಿರಾ ಎನ್ ಕೆ

ಹೆಬ್ರಿ: ಚಾರ ಶ್ರೀ ಮಹಿಷಮರ್ದಿನಿ ಅಮ್ಮನವರ ಮತ್ತು ಮಹಾಗಣಪತಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ ಮಂಗಳವಾರ ನಡೆಯಿತು.

ದೇವರಿಗೆ ಫಲನ್ಯಾಸ, ಪ್ರಾರ್ಥನೆ, ಪಂಚಾಮೃತ ಅಭಿಷೇಕ, ಚಂಡಿಕಾ ಹೋಮ, ತುಲಾಭಾರ ಸೇವೆ, ಗಣಪತಿ ಹೋಮ, ಭಜನಾ ಕಾರ್ಯಕ್ರಮ, ಚಂಡಿಕಾ ಹೋಮದ ಪೂಜೆ ಮತ್ತು ಪೂರ್ಣಾಹುತಿ, ಮಹಾಮಂಗಳಾರತಿ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಯಕ್ಷಗಾನ ತಾಳಮದ್ದಳೆ, ದೀವಿಟಿಗೆ ಸಲಾಮು, ಉತ್ಸವ ಬಲಿ, ನರ್ತನ ಸೇವೆ, ದರ್ಶನದೊಂದಿಗೆ ಕೆಂಡಸೇವೆ, ಮಹಾ ರಂಗಪೂಜೆ, ಶ್ರೀದೇವರು ಹಾಗೂ ಪರಿವಾರಗಳಿಗೆ ಭೂತ ಬಲಿ ಸೇವೆ, ಮಹಾಪ್ರಸಾದ ವಿತರಣೆ ನಡೆಯಿತು. ಆಡಳಿತ ಅಧಿಕಾರಿ ನವೀನ್ ಕುಮಾರ್ ಕುಕ್ಕುಜೆ, ತಂತ್ರಿ ನಾಗರಾಜ್ ಜೋಯಿಸ್, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಕರಬ, ಸಹ ಅರ್ಚಕ ವೃಂದ, ದರ್ಶನ ಪಾತ್ರಿ ರಮೇಶ್ ಸೋಮಯಾಜಿ, ಗ್ರಾಮಸ್ಥರು ಉಪಸ್ಥಿತರಿದ್ದರು.

\