ಕೋಲಾರ: ನಗರದ ಎಸ್ಎನ್ಆರ್ ಆಸ್ಪತ್ರೆ, ಬಸ್ ನಿಲ್ದಾಣ, ಕಾರಗೃಹ, ಸರ್ಕಾರಿ ವಸತಿ ನಿಲಯಗಳಿಗೆ ಗುರುವಾರ ಭೇಟಿ ನೀಡಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಮತ್ತು ತಂಡ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಯ್ದ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದ ತಂಡವು ಸ್ವಚ್ಛತೆ, ಇಲಾಖೆಯಿಂದ ಸೇವೆ ಕಲ್ಪಿಸುವುದು. ಹಾಸ್ಟ್ಟೆಲ್ನಲ್ಲಿ ಊಟ, ತಿಂಡಿಯ ಶುಚಿ&ರುಚಿ, ಆಸ್ಪತ್ರೆಯಲ್ಲಿನ ವ್ಯವಸ್ಥೆ ಪರಿಶೀಲಿಸಿದರು.
ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡದೇ ಇರುವುದು, ಅಗತ್ಯ ಔಷಧಗಳ ಸರಬರಾಜು, ಶಸ್ತ್ರ ಚಿಕಿತ್ಸೆಗಾಗಿ ಬೇಕಾಗಿರುವ ಸಲಕರಣೆಗಳ ಸರಬರಾಜು, ರಕ್ತ ಪರೀಾ ಕೇಂದ್ರದಲ್ಲಿ ಪರೀೆಗಳ ಲಭ್ಯತೆ ಸೇರಿ ಹೀಗೆ ಹಲವು ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು.
ಆಯೋಗದ ಸದಸ್ಯ ಎಸ್.ಕೆ.ವೆಂಟಿಗೋಡಿ, ತಹಸೀಲ್ದಾರ್ ಡಾ.ನಯನಾ, ಡಿ.ಎಸ್.ಡಾ.ಮಮತ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಇದ್ದರು.
ಬೆಡ್ ನೀಡದೆ ರ್ನಿಲಕ್ಷ್ಯ: ಮೊದಲಿಗೆ ನಗರದ ಎಸ್ಎನ್ಆರ್ ಆಸ್ಪತ್ರೆಗೆ ಭೇಟಿ ನೀಡಿದ ತಂಡವು, ತುರ್ತು ಚಿಕಿತ್ಸಾ ಟಕ, ಒಪಿಡಿ ಕೌಂಟರ್ ವೀಸಿದರು. ರೋಗಿಗಳೊಂದಿಗೆ ಚರ್ಚೆ ನಡೆಸಿದರು. ವೇಮಗಲ್ ಕಡೆಯ ವ್ಯಕ್ತಿಯೊಬ್ಬರು ನೆನ್ನೆಯ ರಾತ್ರಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಬೆಡ್ ನೀಡದೆ ಸತಾಯಿಸುತ್ತಿದ್ದಾರೆ. ವಾರ್ಡ್ ಸಿಬ್ಬಂದಿಯನ್ನು ಕೇಳಿದ್ರೆ ಬೇಡ್ ಖಾಲಿಯಿಲ್ಲ ಅಂತ ಹೇಳುತ್ತಿದ್ದಾರೆ, ನಾನು ಬಡವ ಅನ್ನೋ ಕಾರಣಕ್ಕೆ ಬೆಡ್ ನೀಡುತ್ತಿಲ್ಲ. ಆದ್ದರಿಂದ ಪೊಲೀಸರಿಗೆ ದೂರು ನೀಡಲು ಹೋಗುತ್ತಿದ್ದೇನೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕಿ ಡಾ.ಮಮತಾ, ಬೆಡ್ ಖಾಲಿಯಿಲ್ಲ ಅಂತ ಹೇಳಲು ಸಾಧ್ಯವಿಲ್ಲ. ರಾತ್ರಿ ಬಂದಿರುವುದರಿಂದ ವಾರ್ಡ್ಗೆ ಸ್ಥಳಾಂತರ ಮಾಡಿರಬಹುದು ಎಂದು ಸಿಬ್ಬಂದಿಯನ್ನು ಕರೆಯಿಸಿ ವಿಚಾರಿಸಿದರು. ಆಗ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಿ ವಾರ್ಡ್ಗೆ ಕಳುಹಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಗರಂ ಆದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ರೋಗಿಗಳ ಬಗ್ಗೆ ಉದಾಸೀನ ತೋರಬೇಡಿ. ಕಾಳಜಿಯಿಟ್ಟು ಸೇವೆ ಮಾಡಿ ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳಿಂದ ದೂರುಗಳ ಸುರಿಮಳೆ: ನಗರದ ಇಟಿಸಿಎಂ ವೃತ್ತದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯಗಳಿಗೆ ಆಗಮಿಸಿದರು. ವಿದ್ಯಾರ್ಥಿಗಳೊಂದಿಗೆ ಚರ್ಚಿಸುತ್ತಿದ್ದಾಗ ವಿದ್ಯಾರ್ಥಿಗಳು ದೂರುಗಳ ಸುರಿಮಳೆ ಗೈದರು. ಕುಡಿಯುವ ನೀರಿನ ಅಸಮರ್ಪಕ ಪೂರೈಕೆ, ರುಚಿಯಿಲ್ಲದ ಊಟ ಕುರಿತು ಅಧ್ಯಕ್ಷರ ಗಮನಕ್ಕೆ ತಂದರು.ಆಗ ಮೇಲ್ವಿಚಾರಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು, ಹಾಸ್ಟೆಲ್ಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು. ದೂರದ ಊರುಗಳಿಂದ ನಗರಕ್ಕೆ ಬಂದು ವ್ಯಾಸಂಗ ಮಾಡುತ್ತಾರೆ. ಸರಿಯಾದ ಸೌಲಭ್ಯ ಇಲ್ಲ ಅಂದರೆ ಹೇಗೆ, ಇದನ್ನೆಲ್ಲ ಸರಿಪಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಅಧಿಕಾರಿಗಳು ಪರಿಶೀಲಿಸಬೇಕು: ನಗರದ ಕೆಎಸ್ಆರ್ಟಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸ್ವಚ್ಛ್ಚತೆ, ಮೂಲ ಸೌಲಭ್ಯಗಳ ವ್ಯವಸ್ಥೆ, ಪ್ರಯಾಣಿಕರಿಗೆ ಬಸ್ ಲಭ್ಯತೆ ಕುರಿತು ಮಾಹಿತಿ ಪಡೆದುಕೊಂಡ ತಂಡವು, ನಿಲ್ದಾಣದಲ್ಲಿನ ವಾಣಿಜ್ಯ ಮಳಿಗೆಗಳಲ್ಲಿನ ವಸ್ತುಗಳನ್ನು ಉತ್ಪಾದನೆ, ಅವಧಿ ಮುಗಿದ ದಿನಾಂಕ, ಕಂಪನಿ ವೀಸಿದರು. ಎಂಆರ್ಪಿ ದರಕ್ಕಿಂತ ಹೆಚ್ಚು ಮಾರಾಟ ಮಾಡುವುದು, ಅವಧಿ ಮುಗಿದ ವಸ್ತುಗಳನ್ನು ಮಾರಾಟ ಮಾಡಿದ್ದು ಕಂಡು ಬಂದರೆ ಕೂಡಲೇ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಅಂಗಡಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.