Chaos reigns in Ranjanagi SC Colony! 
ಜಿಲ್ಲೆ

ಅವ್ಯವಸ್ಥೆ ಆಗರ ರಂಜಣಗಿ ಎಸ್ಸಿ ಕಾಲನಿ!

Vijayapura - Desk - Doddanagouda Gudihindin

ಮುಧೋಳ ಬಯಲು ಶೌಚಮುಕ್ತ ಗ್ರಾಮ ಮಾಡಬೇಕು ಎನ್ನುವ ಸರ್ಕಾರದ ಯೋಜನೆ, ಯೋಚನೆ ಹಲವಾರು ಗ್ರಾಮಗಳಲ್ಲಿ ಇನ್ನೂ ಕನಸಾಗಿಯೇ ಉಳಿದಿದೆ ಎನ್ನುವುದಕ್ಕೆ ತಾಲೂಕಿನ ಉತ್ತೂರ ಗ್ರಾಮ ಪಂಚಾಯಿತಿಗೆ ಸೇರಿದ ರಂಜಣಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲನಿ ಉದಾಹರಣೆಯಾಗಿದೆ.

ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟ ಜಾತಿ ಜನಾಂಗದ ಜನ ಇದ್ದು, ಅವರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪರಿಶಿಷ್ಟ ಜಾತಿ ಕಾಲನಿಯ ದಕ್ಷಿಣ ಭಾಗದಲ್ಲಿ ಬರುವ ಚನ್ನಾಳ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಗೆ ಹೊಂದಿಕೊಂಡಿದೆ. ಈ ರಸ್ತೆಯ ಮೇಲೆ ಹಾಯ್ದು ಬೇರೆ ಊರುಗಳಿಗೆ ತೆರಳುವ ಜನರು ರಸ್ತೆ ಬದಿ ಕಂಡು ಬರುವ ಬಹಿರ್ದೆಸೆ ದೃಶ್ಯ ನೋಡಿ ದ್ವಿಚಕ್ರ ಸವಾರರು ಹಾಗೂ ಪಾದಚಾರಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಈ ಕಾಲನಿಯಲ್ಲಿ ಸುಮಾರು ಎರಡು ದಶಕಗಳ ಹಿಂದೆ ಅವೈಜ್ಞಾನಿಕವಾಗಿ ಬಾಯ್ತೆರೆದ ಚರಂಡಿ ನಿರ್ಮಿಸಿದ್ದಾರೆ. ಅವು ಈಗ ಸಾಂಕ್ರಾಮಿಕ ರೋಗಗಳ ಉತ್ಪಾದನಾ ಕೇಂದ್ರಗಳಾಗಿ ಪರಿಣಮಿಸಿವೆ.

ಈ ಕಾಲನಿಯು 159 ಮನೆಗಳಿಂದ ಕೂಡಿದೆ. ಇಲ್ಲಿ ಹಾಕಿರುವ ಸಿಸಿ ರಸ್ತೆಯೂ ಕಳಪೆಯಾಗಿದೆ. ಗ್ರಾಪಂನಿಂದ ಕೊರೆದ ಕೊಳವೆ ಬಾವಿ ನಿರ್ವಹಣೆ ಮಾಡಿಲ್ಲ ಎಂದು ಕಾಲನಿ ನಿವಾಸಿಗಳು ದೂರಿದ್ದಾರೆ.