filter: 0; fileterIntensity: 0.0; filterMask: 0; captureOrientation: 90; module: photo; hw-remosaic: false; touch: (-1.0, -1.0); modeInfo: ; sceneMode: 8; cct_value: 4343; AI_Scene: (-1, -1); aec_lux: 298.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 40; 
ಜಿಲ್ಲೆ

ದತ್ತಾತ್ರೇಯ ದೇಗುಲದಲ್ಲಿ ಹನುಮಾನ ಚಾಲೀಸಾ ಪಠಣ

ನರೇಗಲ್ಲ: ರಾಮಾಯಣದಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತಿತರ ಪಾತ್ರಗಳು ಅದೆಷ್ಟು ಮುಖ್ಯವಾಗಿವೆಯೋ ಹನುಮಂತನೂ ಅಷ್ಟೇ ಮುಖ್ಯ ಪಾತ್ರಧಾರಿ. ಹನುಮಂತನಿಲ್ಲದೆ ರಾಮಾಯಣವು ಅಪೂರ್ಣ ಎನ್ನಿಸಿಕೊಳ್ಳುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು. ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಗುರುವಾರ ಜರುಗಿದ ಹನುಮಾನ ಚಾಲೀಸಾ ಪಠಣ ಅಭ್ಯಾಸ ವರ್ಗದಲ್ಲಿ ಅವರು ಮಾತನಾಡಿದರು. ರಾವಣನ ಆಸ್ಥಾನದಲ್ಲಿ ತನ್ನ ಬಾಲಕ್ಕೆ ಬೆಂಕಿ ಹಚ್ಚಿದ್ದನ್ನು ಕಂಡು ಕುಪಿತನಾದ ಹನುಮಂತ, ರಾವಣನಿಗೆ ಬುದ್ಧಿ ಕಲಿಸಲು ಇಡೀ ಲಂಕೆಯನ್ನೇ ದಹನ ಮಾಡಿದ ಶಕ್ತಿವಂತ. ಪ್ರತಿ ವಾರವೂ ಹನುಮಾನ ಚಾಲೀಸಾ ಪಠಣದ ಅಭ್ಯಾಸ ವರ್ಗವು ನಡೆಯುತ್ತಿದ್ದು, ಈ ಮೂಲಕ ನಮ್ಮಲ್ಲಿ ಶಕ್ತಿ, ಯುಕ್ತಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ಶೇಷಗಿರಿ ಕುಲಕರ್ಣಿ, ಎಸ್.ಎಚ್. ಕುಲಕರ್ಣಿ, ಅಜಿತ ಕುಲಕರ್ಣಿ, ಸುಶೀಲಾ ಪುರಾಣಿಕ, ರೂಪಾ ಗ್ರಾಮಪುರೋಹಿತ, ಲಕ್ಷ್ಮೀ ಗ್ರಾಮಪುರೋಹಿತ, ವಿದ್ಯಾ ಹೆಗಡೆ, ಇತರರಿದ್ದರು.