ಜಿಲ್ಲೆ

ಚನ್ನಸಂಗಮೇಶ್ವರ ಬದುಕು ಮಾದರಿ

ಪ್ರಶಾಂತ ಹೂಗಾರ

ಅರಟಾಳ: ಸದ್ಗುರುವಿನ ಕೃಪಾಶೀರ್ವಾದದಿಂದ ಮಾತ್ರ ಜೀವನದಲ್ಲಿ ಮುಕ್ತಿ ಕಾಣಲು ಸಾಧ್ಯ ಎಂದು ಹಿಪ್ಪರಗಿಯ ಸದ್ಗುರು ಪ್ರಭುಜಿ ಮಹಾರಾಜರು ಹೇಳಿದರು.

ಸಮೀಪದ ಬಾಡಗಿ ಗ್ರಾಮದಲ್ಲಿ ಸದ್ಗುರು ಚನ್ನಸಂಗಮೇಶ್ವರ ಮಹಾರಾಜರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಚನ್ನಸಂಗಮೇಶ್ವರ ಸಾಧು ಮಹಾರಾಜರ ಜೀವನ ಎಲ್ಲರಿಗೂ ಆದರ್ಶ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿದ್ಧಲಿಂಗ ಸಾಧು ಮಹಾರಾಜರು ಮಾತನಾಡಿ, ಪ್ರತಿಕ್ಷಣ ಗುರುವಿನ ನಾಮಸ್ಮರಣೆ ಮಾಡಬೇಕು ಎಂದರು. ಸಂಗಯ್ಯ ಹಿರೇಮಠ ಮಾತನಾಡಿ, ಚನ್ನಸಂಗಮೇಶ್ವರರು ನಡೆದ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದರು.

ಹಿಪ್ಪರಗಿ ಸಿದ್ಧಾರೂಢ ಶರಣರು, ಸಿದ್ಧಲಿಂಗ ಮಹಾರಾಜರು, ಶಿವಾನಂದ ಶರಣರು, ಬಾಡಗಿ ಬಣಸಿದ್ಧ ಮಹಾರಾಜರು, ಚಂದ್ರಶೇಖರ ಆದಿಬಸವಗೋಳ, ಗ್ರಾಪಂ ಸದಸ್ಯ ಸಿದ್ದು ಹಳ್ಳಿ, ಶಿವಾನಂದ ನೇಮಗೌಡ, ಚನ್ನಪ್ಪ ನೇಮಗೌಡ, ರಾಮಚಂದ್ರ ಬಿಜ್ಜರಗಿ ಇತರರಿದ್ದರು. ಬಿ.ಕೆ.ಮುಧೋಳ ನಿರೂಪಿಸಿದರು.