ಜಿಲ್ಲೆ

ರೋಟರಿ ಟಾಯ್ಸ್ ಸಿಟಿಗೆ ಶೇಖರ್ ಲಾಡ್  ಅಧ್ಯಕ್ಷ

 ಚನ್ನಪಟ್ಟಣ
ರೋಟರಿ ಟಾಯ್ಸ್ ಸಿಟಿ  ಶಾಖೆಯ  2023-24 ನೇ ಸಾಲಿನ  ನೂತನ ಅಧ್ಯಕ್ಷರಾಗಿ ನಗರದ ಉದ್ಯಮಿ ಶೇಖರ್ ಲಾಡ್  ಮತ್ತು  ಕಾರ್ಯದರ್ಶಿಯಾಗಿ ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ  ಆಯ್ಕೆಯಾಗಿದ್ದಾರೆ.
ನಗರದ 5 ನೇ ಅಡ್ಡರಸ್ತೆಯಲ್ಲಿರುವ ರೋಟರಿ ಕಚೇರಿಯಲ್ಲಿ ಸೋಮವಾರ ನಡೆದ ಶಾಖೆಯ ಪದಾಧಿಕಾರಿಗಳು ಮತ್ತು ಸದಸ್ಯರ ಸಭೆಯಲ್ಲಿ ಈ ಇಬ್ಬರ ಆಯ್ಕೆ ನಡೆದಿದೆ.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಶೇಖರ್ ಲಾಡ್, ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ‌. ಈಗಾಗಲೇ ನಮ್ಮ ಶಾಖೆ ವತಿಯಿಂದ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಮುಂದಿನ ದಿನಗಳ ತಮ್ಮ ಅಧಿಕಾರದ ಅವಧಿಯಲ್ಲೂ ಸಹ ಹೆಚ್ಚಿನ  ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ರೋಟರಿ ಟಾಯ್ಸ್ ಸಿಟಿ ಶಾಖೆಯ ನಿಕಟಪೂರ್ವ ಅಧ್ಯಕ್ಷ  ಬೈ ಶ್ರೀನಿವಾಸ್, ಕಾರ್ಯದರ್ಶಿ ನಿತಿನ್,  ಕ್ಲಬ್ ಅಡ್ವೈಸರ್ ಬಿ.ಎಂ. ನಾಗೇಶ್ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.