ಜಿಲ್ಲೆ

ಪ್ರೇಮ ಸಾಯಿ ಹೆಸರಲ್ಲಿ ವಂಚನೆ ಒಬ್ಬನ ಅರೆಸ್ಟ್​

ಚನ್ನಪಟ್ಟಣ

ನಾನು ಪ್ರೇಮಸಾಯಿ ದೇವಮಾನವ. ಜನರ ಕಷ್ಟಗಳನ್ನು ಪರಿಹರಿಸುತ್ತೇನೆ ಎಂದು ಹೇಳಿಕೊಂಡು ಸಾರ್ವಜನಿಕರಿಗೆ ವಂಚಿಸಿದ ತಂಡದ ಓರ್ವ ಆರೋಪಿಯನ್ನು ಪೂರ್ವ ಪೊಲೀಸ್​ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಾಹಿರಾಜ್​ (43) ಬಂಧಿತ. ಮಹಾರಾಷ್ಟ್ರದ ಕೊಲ್ಲಾಪುರದಿಂದ ಬಂದಿದ್ದ ತಂಡವೊಂದು ದೇವಮಾನವ ಪ್ರೇಮ ಸಾಯಿಬಾಬಾ ಹೆಸರಿನಲ್ಲಿ ನಗರದಲ್ಲಿ ಹಲವರಿಗೆ ವಂಚಿಸಿತ್ತು.

ಈ ತಂಡದಿಂದ ವಂಚನೆಗೆ ಒಳಗಾಗಿದ್ದ ಮಂಗಳವಾರ ಪೇಟೆಯ ಮರಳು ಹೊಲದ ಸಿಂಧು ಎಂಬಾಕೆ ತಂಡದ ನಾಯಕ ಸಚಿನ್​ ಅಕಾರಾಂ ಸರ್​ಗರ್​ ಸೇರಿ 6 ಮಂದಿಯ ವಿರುದ್ಧ ಪೂರ್ವ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎ2 ಆರೋಪಿ ಸಾಹಿರಾಜ್​ ಎಂಬಾತನನ್ನು ಎಸ್​ಪಿ ಸಂತೋಷ್​ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್​ಪಿ ಓಂಪ್ರಕಾಶ್​, ನಗರ ಸಿಪಿಐ ದಿವಾಕರ್​ ನೇತೃತ್ವದಲ್ಲಿ ಪಿಎಸ್​ಐ ಆಕಾಶ್​ ಬಿ.ಪತ್ತಾರ್​ ನೇತೃತ್ವದ ತಂಡ ಬಂಧಿಸಿದೆ. ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.