ಜಿಲ್ಲೆ

ಹಾರ್ಡ್ ವೇರ್ ಅಂಗಡಿಯಲ್ಲಿ ಕಳವು

ಚನ್ನಪಟ್ಟಣ: ಹಾರ್ಡ್‌ವೇರ್ ಅಂಗಡಿಯ ಮೇಲ್ಛಾವಣಿಯ ಶೀಟ್ ಕತ್ತರಿಸಿ ಅಂಗಡಿಯಲ್ಲಿನ ಸುಮಾರು 1.37 ಲಕ್ಷ ರೂ. ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿರುವ ಘಟನೆ ತಾಲೂಕಿನ ದೊಡ್ಡಮಳೂರು ಬಳಿ ನಡೆದಿದೆ.

ಗ್ರಾಮದ ಬೆಂ-ಮೈ ಹಳೇ ಹೆದ್ದಾರಿಯ ಬಳಿ ತಾಲೂಕಿನ ಆಣಿಗೆರೆ ಗ್ರಾಮದ ಮಧು ಎಂಬುವವರು  ಮಹಾಲಕ್ಷ್ಮೀ ಟ್ರೇಡರ್‍ಸ್ ಹೆಸರಿನ ಹಾರ್ಡ್‌ವೇರ್ ಅಂಗಡಿ ಇಟ್ಟುಕೊಂಡಿದ್ದರು‌. ಎಂದಿನಂತೆ ಶನಿವಾರ ರಾತ್ರಿ ವಹಿವಾಟು ಮುಗಿಸಿ ಮನೆಗೆ ತೆರಳಿದ್ದರು.
ಭಾನುವಾರ ಬೆಳಗ್ಗೆ ಅಂಗಡಿ ತೆರೆದಾಗ ಕಳ್ಳತನವಾಗಿರುವುದು ದೃಢಪಟ್ಟಿದೆ. ಅಂಗಡಿಯಲ್ಲಿದ್ದ ಜಾಗ್ವಾರ್ ಕಂಪನಿಯ ನಲ್ಲಿಗಳು ಹಾಗೂ ನಲ್ಲಿ ಸಾಮಾನುಗಳು, ಪಿಲ್ಲರ್‌ಕಾಕ್, ಸಿಂಕ್‌ಕಾಕ್, ಓವರ್‌ಹೆಡ್ ಷವರ್‌ಗಳು ಸೇರಿದಂತೆ ಸುಮಾರು ೧.೩೭ ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.