ಜಿಲ್ಲೆ

ವಿಶ್ವ ಶಾಂತಿಯಾಗಿ ಪಂಚಶೀಲ ಯಾತ್ರೆ ಚನ್ನಪಟ್ಟಣದಲ್ಲಿ ಸಿಪಿವೈ ಚಾಲನೆ

ಗಂಗಾಧರ ಬಿ ವಿ

ಚನ್ನಪಟ್ಟಣ
ವಿಶ್ವಶಾಂತಿಗಾಗಿ ಚಾಮರಾಜನಗರದ ನಳಂದ ವಿಶ್ವವಿದ್ಯಾನಿಲಯ ಹಾಗೂ ತಾಲೂಕಿನ ಸಂಕಲಗೆರೆ ಗ್ರಾಮದ ಮಹಾಕರುಣ ಬೌದ್ಧ ವಿಹಾರದ ವತಿಯಿಂದ ತಾಲೂಕಿನಲ್ಲಿ ಹಮ್ಮಿಕೊಂಡಿರುವ 30 ದಿನಗಳ ಪಂಚಶೀಲ ಪಾದಯಾತ್ರೆ ಹಾಗೂ ಭಗವಾನ್ ಬುದ್ಧನ ಅಸ್ಥಿಯ ಮೆರವಣಿಗೆಗೆ ಮೇಲ್ಮನೆ ಸದಸ್ಯ ಸಿ.ಪಿ. ಯೋಗೇಶ್ವರ್ ನಗರದ ಅಂಬೇಡ್ಕರ್ ಪುತ್ಥಳಿ ಎದುರು ಸೋಮವಾರ ಚಾಲನೆ ನೀಡಿದರು.

ಈ ಪಾದಯಾತ್ರೆ ತಾಲೂಕಿನ ಪ್ರತಿ ಹಳ್ಳಿಯಲ್ಲೂ ಸಂಚರಿಸಲಿದ್ದು, ಪಂಚಶೀಲ ತತ್ವಗಳ ಬೋಧನೆ ಹಾಗೂ ಶಾಂತಿ ಸಂದೇಶ ಸಾರುವುದು ಉದ್ದೇಶವಾಗಿದೆ. ನಗರದ ಅಂಬೇಡ್ಕರ್ ಪುತ್ಥಳಿಯಿಂದ ಆರಂಭವಾದ ಈ ಯಾತ್ರೆ ಅಂಬೇಡ್ಕರ್ ನಗರ, ಅಪ್ಪಗೆರೆ ಗ್ರಾಮಗಳಲ್ಲಿ ಸಂಚರಿಸಿ, ನೀಲಕಂಠನಹಳ್ಳಿಯಲ್ಲಿ ಮೊದಲ ದಿನದ ಯಾತ್ರೆ ಮುಕ್ತಾಯವಾಯಿತು. ಯಾತ್ರೆಯಲ್ಲಿ ಭಗವಾನ್ ಬುದ್ಧನ ಅಸ್ತಿಯ ಮೆರವಣಿಗೆ ನಡೆಯುತ್ತಿರುವುದು ವಿಶೇಷ.

ಈ ಯಾತ್ರೆಯ ನೇತೃತ್ವ ವಹಿಸಿರುವ ಚಾಮರಾಜ ನಗರದ ನಳಂದ ಬೌದ್ಧ ವಿಶ್ವವಿದ್ಯಾನಿಲಯದ ಕಾರ್ಯದರ್ಶಿ ಭೋದಿದತ್ತ ಭಂತೇಜಿ ವಾತನಾಡಿ, ಮನುಕುಲದ ಉದ್ದಾರಕ್ಕಾಗಿ ನಿರಂತರ ಧ್ಯಾನ ಹಾಗೂ ತಪಸ್ಸಿನಿಂದ ಜ್ಞಾನೋದಯ ಪಡೆದುಕೊಂಡ ಭಗವಾನ್ ಬುದ್ಧರು, ತಾವು ಕಂಡುಕೊಂಡ ಅನರ್ಯ್ ಜ್ಞಾನವನ್ನು ಮನುಕುಲಕ್ಕೆ ಸಾರಿದರು. ಅವರ ವಿಚಾರ ಧಾರೆಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಮೂಲಕ ಜಗತ್ತಿಗೆ ಶಾಂತಿ ದೊರೆಯುವಂತೆ ವಾಡುವ ಪ್ರಯತ್ನವೇ ಈ ಪಂಚಶೀಲ ಯಾತ್ರೆಯಾಗಿದೆ ಎಂದರು.
ಆಹಿಂಸೆ, ಕಳ್ಳತನ, ಶೀಲಹರಣ ವಾಡಬಾರದು, ಸುಳ್ಳು ಹೇಳಬಾರದು, ವಾದಕವಸ್ತು ಮತ್ತು ಪಾನೀಯವನ್ನು ಸೇವಿಸಬಾರದು ಎಂಬುದು ಭಗವಾನ್ ಬುದ್ಧ ನಮಗೆ ತಿಳಿಸಿರುವ ಪಂಚಶೀಲ ತತ್ವಗಳು. ಇದನ್ನು ಪ್ರತಿಯೊಬ್ಬರು ಪಾಲಿಸಿದ್ದೇ ಆದಲ್ಲಿ ಇಡೀ ವಿಶ್ವ ಹಲವಾರು ಹಿಂಸೆಗಳಿಂದ ಮುಕ್ತಿಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಪಂಚಶೀಲ ತತ್ವವನ್ನು ಎಲ್ಲೆಡೆ ಪಸರಿಸುವ ಉದ್ದೇಶದಿಂದ ಈ ಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ವಾತನಾಡಿದರು. ಬೌದ್ಧ ಭಿಕ್ಕುಗಳಾದ ಧಮ್ಮವೀರ ಭಂತೇಜಿ, ತಿಸ್ಸಭಂತೇಜಿ, ಸುಗತಪಾಲ ಭಂತೇಜಿ, ಧಮ್ಮವೀರ ಭಂತೇಜಿ, ವಕೀಲಸ ಸಂದ ವಾಜಿ ಅಧ್ಯಕ್ಷ ಟಿ.ವಿ.ಗಿರೀಶ್, ಹಾಪ್‌ಕಾಮ್ಸ್ ನಿರ್ದೇಶಕ ಶಿವವಾದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನೀಲ್‌ಕುವಾರ್, ಬಿಜೆಪಿ ವಾಜಿ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ, ಮಹಾಕರುಣಾ ಬುದ್ಧ ವಿಹಾರದ ಸದಸ್ಯರಾದ ಸಂಕಲಗೆರೆ ಕೃಷ್ಣಪ್ಪ, ಕೋಡಂಬಳ್ಳಿ ಹನುಮಂತಣ್ಣ, ಹೊಂಗನೂರು ಶಿವು, ಬಾಚಹಳ್ಳಿ ಪ್ರದೀಪ್, ಸಂಕಲಗೆರೆ ಲೋಕೇಶ್, ಬೈರಾಪಟ್ಟಣ ಕಿರಣ್, ರಾಂಪುರ ಅರುಣ್, ನುಣ್ಣೂರು ಸತೀಶ್, ಅಂಬೇಡ್ಕರ್ ನಗರ ಪ್ರಸಾದ್, ರು, ಅಕ್ಕೂರು ಹೊಸಹಳ್ಳಿ ಮಧು, ಚಕ್ಕೆರೆ ಗಂಗಾಧರ್ ಸೇರಿದಂತೆ ಹಲವು ದಲಿತ ಮುಖಂಡರು ಇದ್ದರು.