ರಬಕವಿ-ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ತಹಸೀಲ್ದಾರ್ ಗಿರೀಶ ಸ್ವಾದಿ ಪೂಜೆ ಸಲ್ಲಿಸಿದರು. ಸಮಾಜ ಬಾಂಧವರು ಹಾಗೂ ಅಧಿಕಾರಿಗಳು ಪೂಜೆ ಸಲ್ಲಿಸಿದರು. 
ಜಿಲ್ಲೆ

ಚನ್ನಮ್ಮಳ ಹೋರಾಟ, ಆದರ್ಶ ನಮ್ಮಗೆಲ್ಲ ಮಾದರಿ

ರಬಕವಿ/ಬನಹಟ್ಟಿ: ವೀರರಾಣಿ ಕಿತ್ತೂರ ಚನ್ನಮ್ಮ ಈ ನಾಡಿನ ರಕ್ಷಣೆಗಾಗಿ ಹೋರಾಡಿದ ಮಹಾನ್ ಮಹಿಳೆ ಎಂದು ತಹಸೀಲ್ದಾರ್ ಗಿರೀಶ ಸ್ವಾದಿ ತಿಳಿಸಿದರು.

ರಬಕವಿ-ಬನಹಟ್ಟಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಬುಧವಾರ ನಡೆದ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತ್ಯುತ್ಸವದ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪ್ರಮುಖರಲ್ಲಿ ಕಿತ್ತೂರ ಚನ್ನಮ್ಮ ಕೂಡ ಒಬ್ಬರು. ಇಂದಿನ ಯುವ ಪೀಳಿಗೆಗೆ ಚನ್ನಮ್ಮ ಆದರ್ಶವಾಗಿದ್ದಾರೆ. ಚನ್ನಮ್ಮಳ ತತ್ವ ಮತ್ತು ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಮಾಜದ ಮುಖಂಡರಾದ ಶ್ರೀಶೈಲ ದಲಾಲ, ಮಹಾದೇವ ಪಾಲಬಾಂವಿ, ಮಹಾದೇವ ಕೋಟ್ಯಾಳ, ವಿದ್ಯಾಧರ ಸವದಿ, ಬಾಬಾಗೌಡ ಪಾಟೀಲ, ಮಹಾದೇವ ದೂಫದಾಳ, ಲಕ್ಕಪ್ಪ ಪಾಟೀಲ, ಸಿದ್ದು ಗೌಡಪ್ಪನವರ, ಧರೆಪ್ಪ ಉಳ್ಳಾಗಡ್ಡಿ, ಭೀಮಸಿ ಪಾಟೀಲ, ಸಿದ್ದನಗೌಡ ಪಾಟೀಲ, ಬಾಲು ನಂದೆಪ್ಪನವರ, ಅಶೋಕ ಉಳ್ಳಾಗಡ್ಡಿ, ಈಶ್ವರ ಬಿರಾದಾರಪಾಟೀಲ, ಮಲಕಪ್ಪ ಪಾಟೀಲ, ಪವಿತ್ರಾ ತುಕ್ಕಣ್ಣವರ, ಗೌರಿ ಮಿಳ್ಳಿ, ಬಿ. ಎಂ. ಹಳೇಮನಿ ಇತರರಿದ್ದರು.