ಲೋಕಾಪುರ: ಇಂದಿನ ಯುವ ಜನಾಂಗಕ್ಕೆ ಚನ್ನಮ್ಮನ ತ್ಯಾಗ ಸ್ಫೂರ್ತಿ ಹಾಗೂ ಶಕ್ತಿಶಾಲಿ ಆಗಿದೆ ಎಂದು ಬಿಜೆಪಿ ಯುವ ಅರುಣ ಕಾರಜೋಳ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ ಸಂಗ್ರಾಮದ ಕಿಚ್ಚು ಹೊತ್ತಿಸುವಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಳ ಪಾತ್ರ ಪ್ರಮುಖವಾಗಿದೆ ಎಂದರು.
ಗಣಿ ಉದ್ಯಮಿ ಎಂ.ಎಂ. ವಿರಕ್ತಮಠ ಮಾತನಾಡಿ, ಕಿತ್ತೂರು ವೀರರಾಣಿ ಚನ್ನಮ್ಮ ಅವರ ಬಲಿದಾನವು ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದ ಲಕ್ಷಾಂತರ ಮಂದಿ ಹೋರಾಟಗಾರರಿಗೆ ಸ್ಫೂರ್ತಿ ನೀಡಿತ್ತು ಎಂದರು.
ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಕಾತರಕಿ, ಲೋಕಣ್ಣ ಕತ್ತಿ, ಸಿದ್ದರಾಮಪ್ಪ ದೇಸಾಯಿ, ಬಂಡು ಘಾಟಗೆ, ವಿರೇಶ ಪಂಚಕಟ್ಟಿಮಠ, ಗೋಪಾಲಗೌಡ ಪಾಟೀಲ, ಬಿ.ಎಲ್. ಬಬಲಾದಿ, ವಿನೋದ ಘೋರ್ಪಡೆ, ಪರಮಾನಂದ ಟೊಪಣ್ಣವರ, ಜಾಕೀರ್ ಅತ್ತಾರ, ಆನಂದ ಹವಳಖೋಡ, ಅರುಣ ನರಗುಂದ, ಹೊಳಬಸು ಕಾಸರ, ಆಸೀಫ್ ಜೀರಗಾಳ, ಸದಾಶಿವ ನಾವ್ಹಿ, ಅರುಣ ಮುಧೋಳ, ಮಾರುತಿ ರಂಗಣ್ಣವರ, ಮಹೇಶ ಮುಳ್ಳೂರು ಇತರರಿದ್ದರು.