ಬೆಳಗಾವಿ ನಗರದಲ್ಲಿ ನಿಯಮ ಮೀರಿ ಅನಗತ್ಯವಾಗಿ ಸಂಚರಿಸುವವರನ್ನು ಚನ್ನಮ್ಮ ಪಡೆಯ ಸಿಬ್ಬಂದಿ ವಿಚಾರಣೆ ಮಾಡಿದರು. 
ಜಿಲ್ಲೆ

ಚನ್ನಮ್ಮ ಪಡೆಯಿಂದ ಕಾನೂನಿನ ಪಾಠ

Belagavi

ಬೆಳಗಾವಿ: ಲಾಕ್‌ಡೌನ್ ಆದೇಶ ಉಲ್ಲಂಘಿಸಿ ರಸ್ತೆಗಿಳಿದ ಜನರಿಗೆ ಚನ್ನಮ್ಮ ಪಡೆ ಲಾಠಿ ಬೀಸಿ ಕಾನೂನಿನ ಪಾಠ ಕಲಿಸಿದ್ದಾರೆ. ಬೆಳಗಾವಿಯ ಗಾಂಧಿ ನಗರದಲ್ಲಿ ಶುಕ್ರವಾರ ಪೊಲೀಸರು ಹಲವು ಬಾರಿ ಗಸ್ತು ತಿರುಗಿ ಮುಂಜಾಗ್ರತಾ ಕ್ರಮದ ಬಗ್ಗೆ ತಿಳಿಹೇಳಿದ್ದರು.

ಆದರೆ, ಪೊಲೀಸ್ ವಾಹನ ಕಾಣುತ್ತಿದ್ದಂತೆಯೇ ಜನರು ಮನೆಯೊಳಗೆ ಹೋಗಿ ಮತ್ತೆ ಹೊರಗೆ ಬರುತ್ತಿದ್ದರು. ಇದೇ ಚಾಳಿ ಮುಂದುವರಿಸಿದ ಜನರು ರಸ್ತೆಯಲ್ಲಿ ಗುಂಪು ಗುಂಪಾಗಿ ಓಡಾಡುವ ಮೂಲಕ ಲಾಕ್‌ಡೌನ್ ಆದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದ್ದರು. ಈ ಮಾಹಿತಿ ಪಡೆದ ಡಿಸಿಪಿ ಸೀಮಾ ಲಾಟ್ಕರ್ ನೇತೃತ್ವದ ಚನ್ನಮ್ಮ ಪಡೆ ಶುಕ್ರವಾರದಿಂದ ಲಾಠಿ ಬೀಸಲು ಆರಂಭಿಸಿದೆ.