ಜಿಲ್ಲೆ

ಕರ್ಮಯೋಗಿ ಸಿದ್ದರಾಮರ ಕೊಡುಗೆ ಅಪಾರ

ಚನ್ನಗಿರಿ: ಕರ್ಮಯೋಗಿ ಸಿದ್ದರಾಮೇಶ್ವರರು ಶರಣ ಸಂಸ್ಕೃತಿಯನ್ನು ಅಪ್ಪಿಕೊಂಡು ಎಲ್ಲ ಶರಣರನ್ನು ಜತೆಗೆ ತೆಗೆದುಕೊಂಡು ಹೋದ ಮಹಾ ಶರಣ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಂ.ಯು.ಚನ್ನಬಸಪ್ಪ ಹೇಳಿದರು.

ಇಲ್ಲಿನ ನಿವೃತ್ತ ನೌಕರ ಸಂಘದ ಭವನದಲ್ಲಿ ಶನಿವಾರ ಜಿಲ್ಲಾ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ವರ್ಗ, ಜಾತಿ, ಲಿಂಗ ಭೇದವಿಲ್ಲದೇ ಶ್ರಮ ಸಂಸ್ಕೃತಿ ಕಲಿಸಿದ ಕಾಯಕ ಯೋಗಿಯಾಗಿದ್ದರು. ಕೆರೆ ನಿರ್ಮಾಣಕ್ಕೆ ಆದ್ಯತೆ ನೀಡಿ ಕುಡಿವ ನೀರಿನ ಸಮಸ್ಯೆ ನಿವಾರಿಸಿದ್ದರು ಎಂದರು.

ವಿಶ್ವ ಗುರು ಬಸವಣ್ಣ ಭಕ್ತಿಯ ಸಂಕೇತ, ಅಲ್ಲಮರು ವೈರಾಗ್ಯ, ಚನ್ನಬಸವಣ್ಣ ಜ್ಞಾನ ಹಾಗೂ ಸಿದ್ದರಾಮರು ಕರ್ಮಯೋಗಿಯ ಸಂಕೇತವಾಗಿದ್ದಾರೆ ಎಂದು ಹೇಳಿದರು.